×
Ad

ಲಾಲೂ ಯಾದವ್‌ರಿಂದ ಮಟನ್‌ ಖಾದ್ಯ ಅಡುಗೆ ವಿಧಾನ ಕಲಿತ ರಾಹುಲ್‌ ಗಾಂಧಿ: ವಿಡಿಯೋ ಬಿಡುಗಡೆ

Update: 2023-09-03 14:50 IST

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮತ್ತು ಅವರ ಕುಟುಂಬವನ್ನು ಆಗಸ್ಟ್ 4 ರಂದು ಭೇಟಿ ಮಾಡಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಲಾಲೂ ಯಾದವ್‌ ಮಾರ್ಗದರ್ಶನದಲ್ಲಿ ರಾಹುಲ್‌ ಗಾಂಧಿ ಅವರು ʼಚಂಪಾರಣ್ ಮಟನ್‌ʼ ಅಡುಗೆ ತಯಾರಿಸಿದ್ದು, ಹಿರಿಯ ರಾಜಕಾರಣಿಯೊಂದಿಗೆ ಆಹಾರ ಮತ್ತು ರಾಜಕೀಯದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಯಾದವ್‌ ಪುತ್ರ ಮಿಸಾ ಭಾರತಿ ಕೂಡಾ ಇದ್ದರು.

ಬಿಹಾರದ ವಿಶೇಷ ʼಚಂಪಾರಣ್ ಮಟನ್ʼ ಅಡುಗೆ ವಿಧಾನಗಳನ್ನು ಯಾದವ್‌ ಬಳಿಯಿಂದ ಕೇಳಿ ತಿಳಿದುಕೊಂಡಿರುವ ರಾಹುಲ್‌ ಗಾಂಧಿ ಯಾದವ್‌ ಹಾಗೂ ಅವರ ಪುತ್ರ ತೇಜಸ್ವಿ ಯಾದವ್‌ ಜೊತೆಗೆ ರಾಜಕೀಯದ ಬಗ್ಗೆಯೂ ಚರ್ಚೆಗಳನ್ನು ನಡೆಸಿದ್ದಾರೆ.

ಚರ್ಚೆಯ ವೇಳೆ, ಬಿಜೆಪಿ ದೇಶದಲ್ಲಿ ದ್ವೇಷವನ್ನು ಏಕೆ ಹರಡುತ್ತಿದೆ ಎಂದು ರಾಹುಲ್ ಪ್ರಶ್ನಿಸಿದ್ದು, ಇದಕ್ಕೆ ಲಾಲೂ ಯಾದವ್ "(ಬಿಜೆಪಿಯ) ರಾಜಕೀಯ ಹಸಿವು ಎಂದಿಗೂ ತಣಿಯುವುದಿಲ್ಲ" ಎಂದು ಉತ್ತರಿಸಿದ್ದಾರೆ.

ಅಡುಗೆಯ ವಿಚಾರದಲ್ಲಿ ನಾನು ಅಷ್ಟು ಪರಿಣಿತನಲ್ಲ, ಆದರೆ, ಯುರೋಪ್‌ನಲ್ಲಿದ್ದಾಗ ಕೆಲವು ಅಡುಗೆಗಳನ್ನು ಕಲಿತಿದ್ದೆ, ಆದರೆ, ನೀವು ಪಾಕಶಾಸ್ತ್ರದಲ್ಲಿ ಪರಿಣಿತರು ಎಂದು ಬಲ್ಲೆ ಎಂದು ರಾಹುಲ್‌ ಅವರು ಲಾಲೂ ಪ್ರಸಾದ್‌ರನ್ನು ಉದ್ದೇಶಿಸಿ ಹೇಳಿದ್ದಾರೆ. ಇದೇ ವೇಳೆ, ರಾಜಕೀಯದ ಮಸಾಲೆ ಏನು ಎಂದು ರಾಹುಲ್ ಗಾಂಧಿ ಅವರು ಲಾಲು ಪ್ರಸಾದ್ ಯಾದವ್ ಅವರನ್ನು ಪ್ರಶ್ನಿಸಿದ್ದು, “ಅನ್ಯಾಯದ ವಿರುದ್ಧ ಹೋರಾಡಿ ಮತ್ತು ಹೋರಾಡಿ, ಇದುವೇ ರಾಜಕೀಯದ ಮಸಾಲೆ” ಎಂದು ಲಾಲು ಪ್ರಸಾದ್ ಯಾದವ್ ಉತ್ತರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News