×
Ad

ಯುಎಇ ಅಧ್ಯಕ್ಷರನ್ನು ಸೌದಿ ಯುವರಾಜ ಎಂದು ಹೇಳಿ ಟ್ರೋಲ್‌ಗೆ ಗುರಿಯಾದ ರಿಪಬ್ಲಿಕ್‌ ಟಿವಿ

Update: 2023-09-09 13:50 IST

Screengrab: X/@zoo_bear

ಹೊಸದಿಲ್ಲಿ: ಅರ್ನಬ್ ಗೋಸ್ವಾಮಿ ಅವರ ರಿಪಬ್ಲಿಕ್ ಟಿವಿ ವಾಹಿನಿಯಲ್ಲಿ ಯುಎಇ ಅಧ್ಯಕ್ಷರನ್ನು ಸೌದಿ ಯುವರಾಜ ಎಂದು ತೋರಿಸಿ ಟ್ರೋಲ್‌ಗೆ ಗುರಿಯಾಗಿದೆ. ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸುತ್ತಿದ್ದ ವಿದೇಶಿ ನಾಯಕರನ್ನು ತೋರಿಸುವ ಭರದಲ್ಲಿ ರಿಪಬ್ಲಿಕ್‌ ಟಿವಿ ಪ್ರಮಾದವನ್ನು ಮಾಡಿಕೊಂಡಿದೆ ಎನ್ನಲಾಗಿದೆ.

ಯುಎಇ ಅಧ್ಯಕ್ಷ ಶೇಖ್ ಮಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರನ್ನು ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಎಂದು ಹೇಳಿ ರಿಪಬ್ಲಿಕ್‌ ಟಿವಿ ಪ್ರಸಾರ ಮಾಡಿದ್ದು, ಅರ್ನಬ್‌ ಹಾಗೂ ಅವರ ಟಿವಿ ಚಾನೆಲ್‌ ಅನ್ನು ನೆಟ್ಟಿಗರು ಟ್ರೋಲ್‌ ಮಾಡುತ್ತಿದ್ದಾರೆ.

ಈ ಕುರಿತ ವಿಡಿಯೋವನ್ನು ಪತ್ರಕರ್ತ ಮಹಮ್ಮದ್‌ ಝುಬೈರ್‌ x (ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ.

ʼಒಮ್ಮೆ ಸುಳ್ಳು ಸುದ್ದಿ ಹಂಚಿದವರು ಯಾವತ್ತೂ ಸುಳ್ಳು ಹಂಚುತ್ತಿರುತ್ತಾರೆʼ ಎಂದು ನೆಟ್ಟಿಗರೊಬ್ಬರು ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಈ ರೀತಿ ಮಾಡುವುದು ದೇಶಕ್ಕೆ ಆಗಮಿಸುತ್ತಿರುವ ವಿದೇಶಿ ನಾಯಕರಿಗೆ ಕೊಡುವ ಅಗೌರವ ಎಂದು ಕೆಲವರು ಅಭಿಪ್ರಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News