×
Ad

ತುಮಕೂರು | ಕಾರ್ಖಾನೆಯ ಟ್ಯಾಂಕ್ ಸ್ವಚ್ಛಗೊಳಿಸುವಾಗ ಇಬ್ಬರ ಮೃತ್ಯು, ಮತ್ತಿಬ್ಬರು ಅಸ್ವಸ್ಥ

Update: 2025-05-21 23:15 IST

ಸಾಂದರ್ಭಿಕ ಚಿತ್ರ

ತುಮಕೂರು : ಕಾರ್ಖಾನೆಯ ರಾಸಾಯನಿಕ ಸಂಗ್ರಹಿಸುವ ಟ್ಯಾಂಕ್ ಸ್ವಚ್ಛಗೊಳಿಸಲು ಹೋದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಮತ್ತಿಬ್ಬರು ಅಸ್ವಸ್ಥರಾಗಿರುವ ಘಟನೆ ನಗರದ ಹೊರವಲಯದಲ್ಲಿರುವ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಲಾರಸ್ ಬಯೋ ಕಾರ್ಖಾನೆಯಲ್ಲಿ ಸಂಭವಿಸಿರುವುದು ಬುಧವಾರ ವರದಿಯಾಗಿದೆ.

ಮೃತ ಕಾರ್ಮಿಕರನ್ನು ಮಧುಗಿರಿ ತಾಲೂಕಿನ ಮಾಗೋಡು ಗ್ರಾಮದ ನಿವಾಸಿ, ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಪ್ರತಾಪ್ (23), ಶಿರಾ ತಾಲೂಕಿನ ತರೂರು ಗ್ರಾಮದ ನಿವಾಸಿ ವೆಂಕಟೇಶ್ (32)ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಅಸ್ವಸ್ಥರಾದ ಶಿರಾ ತಾಲೂಕಿನ ತರೂರು ಗ್ರಾಮದ ನಿವಾಸಿಗಳಾದ ಮಂಜಣ್ಣ(42), ಯುವರಾಜ್ (32) ಎಂಬವರನ್ನು ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ತುಮಕೂರು ಗ್ರಾಮಾಂತರ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆಗೆ ಮೃತರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News