×
Ad

ಅನಿವಾರ್ಯತೆ ಬಂದರೆ ಜಿ.ಪರಮೇಶ್ವರ್ ಸಿಎಂ ಆಗಲಿ : ಕೆ.ಎನ್.ರಾಜಣ್ಣ

"ಸಿದ್ದರಾಮಯ್ಯ ನಮ್ಮ ಮೊದಲ ಆಯ್ಕೆ; 30-30 ತಿಂಗಳು ಒಪ್ಪಂದ ಎಂದು ಸುಮ್ಮನೇ ಹೇಳುತ್ತಾರೆ"

Update: 2025-11-26 22:05 IST

ರಾಜಣ್ಣ/ಜಿ.ಪರಮೇಶ್ವರ್‌

ತುಮಕೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ, ಸಚಿವ ಸಂಪುಟ ಪುನರ್‌ರಚನೆ ಚರ್ಚೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ನಾಯಕರ ಹೇಳಿಕೆಗಳೂ ಈ ವಿಚಾರಕ್ಕೆ ಪುಷ್ಠಿ ನೀಡುವಂತಿದೆ. ಕೆಲವರು ಡಿ.ಕೆ.ಶಿವಕುಮಾರ್​​​ ಅವರನ್ನು ಸಿಎಂ ಮಾಡಬೇಕೆಂದು ಹೇಳಿಕೆ ನೀಡುತ್ತಿದ್ದರೆ, ಇನ್ನೂ ಕೆಲವರು ಎರಡೂವರೆ ವರ್ಷ ಸಿದ್ದರಾಮಯ್ಯನವರನ್ನೇ ಮುಂದುವರೆಸಬೇಕೆಂದು ಆಗ್ರಹಿಸಿದ್ದಾರೆ.

ಈ ನಡುವೆ ಮಾಜಿ ಸಚಿವ ಕೆ.ಎನ್.ರಾಜಣ್ಣ ಪ್ರತಿಕ್ರಿಯಿಸಿ, "ಎಲ್ಲರೂ ಡಿಕೆ.ಶಿವಕುಮಾರ್​ ನೇತೃತ್ವದಲ್ಲಿ ಮುಂದಿನ ಚುನಾವಣೆಗೆ ಹೋಗೋಣ. ಬಹುಮತ ತಂದು ಡಿ.ಕೆ.ಶಿವಕುಮಾರ್ ಐದು ವರ್ಷ ಸಿಎಂ ಆಗಲಿ" ಎಂದಿದ್ದಾರೆ.

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ ಮಾತನಾಡಿರುವ ಅವರು, ʼಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಈಗ ಸಿಎಲ್​ಪಿ ಸಭೆಯಲ್ಲೇ ತೀರ್ಮಾನ ಆಗಬೇಕು. ಸಿಎಲ್​ಪಿಯಲ್ಲಿ ಯಾರಾದರೂ ರಾಜೀನಾಮೆ ಕೊಡಬೇಕು ಎಂದಿದ್ದಾರೆಯೇ? 30-30 ತಿಂಗಳು ಒಪ್ಪಂದ ಎಂದು ಸುಮ್ಮನೇ ಹೇಳುತ್ತಾರೆ. ನಾಯಕತ್ವ ಬಗ್ಗೆ ಹೈಕಮಾಂಡ್‌ನವರು ಮಾತಾನಾಡಬಾರದು ಎಂದು ಹೇಳಿದ್ದಾರೆ. ನನ್ನ ವೈಯಕ್ತಿಕ ಆಶಯ ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರಬೇಕು. 2013ರ ಚುನಾವಣೆಯಲ್ಲಿ ಪರಮೇಶ್ವರ್ ಪಕ್ಷವನ್ನು ಅಧಿಕಾರಕ್ಕೆ ತಂದರು. ಡಿ.ಕೆ‌.ಕೂಲಿ ಕೇಳಿದಂತೆ ಪರಮೇಶ್ವರ್ ಕೂಡ ಕೂಲಿ ಕೇಳಬೇಕಲ್ಲವೇ? ಮೊದಲು ಡಾ.ಜಿ.ಪರಮೇಶ್ವರ್ ಅವರ ಹಳೇ ಕೂಲಿ ಕ್ಲಿಯರ್ ಆಗಲಿ. ನಮ್ಮ ಮೊದಲ ಆಶಯ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಇರಬೇಕು. ಅನಿವಾರ್ಯತೆ ಬಂದರೆ ಪರಮೇಶ್ವರ್ ಸಿಎಂ ಆಗಲಿ, ಇದು ನನ್ನ ಅಭಿಪ್ರಾಯ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News