ಕರ್ನಾಟಕ ಕ್ರೀಡಾಕೂಟ 2025-26: ವೇಟ್‌ಲಿಫ್ಟಿಂಗ್‌ನಲ್ಲಿ ಪದಕ ಬೇಟೆಯಾಡಿದ ದಕ್ಷಿಣ ಕನ್ನಡ
ಟೇಬಲ್ ಟೆನಿಸ್ ನಲ್ಲಿ ಬೆಂಗಳೂರು ಹುಡುಗ-ಹುಡುಗಿಯರ ಪಾರಮ್ಯ
ತುಮಕೂರು: ದಕ್ಷಿಣ ಕನ್ನಡ ಜಿಲ್ಲೆಯು ತುಮಕೂರು ನಗರದಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟ 2025-26ರ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಏತನ್ಮಧ್ಯೆ, ಬೆಂಗಳೂರು ನಗರದ ಕ್ರೀಡಾಪಟುಗಳು ಟೇಬಲ್ ಟೆನಿಸ್‌ನಲ್ಲಿಪದಕಗಳ ಬೇಟೆಯಾಡಿದರು.
ಕ್ರೀಡಾಕೂಟದ 4ನೇ ದಿನವಾದ ಸೋಮವಾರ ವೇಟ್ ಲಿಫ್ಟಿಂಗ್, ಜುಡೋ, ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಪದಕಗಳ ಸುರಿಮಳೆಯಾದರೆ, ಬಾಸ್ಕೆಟ್‌ಬಾಲ್, ಬಾಕ್ಸಿಂಗ್ ಸೇರಿದಂತೆ ಹಲವು ಸ್ಪರ್ಧೆಗಳ ಆರಂಭಿಕ ಪಂದ್ಯಗಳು ಜರುಗಿದವು.
ಡಾ. ಜಿ. ಪರಮೇಶ್ವರ್ ಒಳಾಂಗಣ ಕ್ರೀಡಾಂಗಣದಲ್ಲಿನಡೆದ ಪುರುಷರ 60 ಕೆ.ಜಿ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡದ ಪ್ರಶಾಂತ್ ಸಿಂಹ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ದಕ್ಷಿಣ ಕನ್ನಡದ ಕವನ್ ಕೆ. ಮತ್ತು ದಾವಣಗೆರೆಯ ಕರಣ್ ಎಂ. ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದುಕೊಂಡರು.
ಮಹಿಳೆಯರ 48 ಕೆ.ಜಿ ವಿಭಾಗದಲ್ಲಿ ದಕ್ಷಿಣ ಕನ್ನಡದ ಶ್ರಾವ್ಯ ಎಂ. ದಕ್ಷಿಣ ಕನ್ನಡದ ಹರ್ಷಿತ ಪಿ.ಪಿ. ಮತ್ತು ಬೆಂಗಳೂರು ನಗರದ ಕೀರ್ತಿಕಾ ಕಾಸಿ ಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿದರು. ಪುರುಷರ 65 ಕೆ.ಜಿ: ತಿಪ್ಪಣ್ಣ ಲಕ್ಕಣ್ಣನವರ್ (ದಕ್ಷಿಣ ಕನ್ನಡ), ಯೋಗೇಶ್ ನಾಯಕ್ ಕೆ. (ಬೆಂಗಳೂರು ನಗರ), ಮನೋಜ್ ಬಿ.ಆರ್. (ದಕ್ಷಿಣ ಕನ್ನಡ) ಕ್ರಮವಾಗಿ ಚಿನ್ನ, ಬೆಳ್ಳಿ ಮತ್ತು ಕಂಚು ಗೆದ್ದುಕೊಂಡರು.ಪುರುಷರ 71 ಕೆ.ಜಿ: ಮಂಜುನಾಥ್ ಮರಾಠಿ (ಉಡುಪಿ), ಚಿರಂಜೀವಿ (ದಕ್ಷಿಣ ಕನ್ನಡ), ಪ್ರತೀಕ್ (ದಕ್ಷಿಣ ಕನ್ನಡ) ಮೊದಲ ಮೂರು ಸ್ಥಾನ ಹಂಚಿಕೊಂಡರೆ, ಮಹಿಳೆಯರ 53 ಕೆ.ಜಿ: ಲಕ್ಷ್ಮಿ ಬಿ (ಚಿತ್ರದುರ್ಗ), ಇವಾನ್ ಜೆಲಿನ್ ಆರ್. (ಬೆಂಗಳೂರು ನಗರ), ಪೂಜಿತಾ ಎಂ. ಆರ್. (ತುಮಕೂರು) ಅನುಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ತಮ್ಮದಾಗಿಸಿಕೊಂಡರು.
ಮಹಿಳೆಯರ 58 ಕೆ.ಜಿ: ಸ್ವಪ್ನ ವೈ.ಜಿ. (ದಕ್ಷಿಣ ಕನ್ನಡ), ಮೋನಿಶಾ ಪಿ. (ಬೆಂಗಳೂರು ನಗರ), ದೇವಿಕಾ ಎಸ್.ಜಿ. (ಶಿವಮೊಗ್ಗ) ಕ್ರಮವಾಗಿ ಚಿನ್ನ, ಬೆಳ್ಳಿ, ಕಂಚಿನ ಪದಕ ಗೆದ್ದುಕೊಂಡರೆ, ಮಹಿಳೆಯರ 63 ಕೆ.ಜಿ: ದಕ್ಷಿಣ ಕನ್ನಡದ ಅನಿಶಾ, ಹಂಸವೇಣಿ ಎ. ಮತ್ತು ಶ್ರಾವಣಿ ಅಶೋಕ್ ಕ್ರಮವಾಗಿ ಪೋಡಿಯಂ ಸ್ಥಾನ ಪಡೆದರು.
ಟೇಬಲ್ ಟೆನಿಸ್: ಬೆಂಗಳೂರು ನಗರ ಸ್ಪರ್ಧಿಗಳಿಂದ ಪಾರಮ್ಯ
ಮಹಾತ್ಮ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಟೇಬಲ್ ಟೆನಿಸ್‌ನಲ್ಲಿ ಬೆಂಗಳೂರು ನಗರದ ಕ್ರೀಡಾಪಟುಗಳು ಪಾರಮ್ಯ ಸಾಧಿಸಿದರು. ಪುರುಷರ ಸಿಂಗಲ್ಸ್‌ನಲ್ಲಿ ಬೆಂಗಳೂರು ನಗರದ ಅಭಿನವ್ ಕೆ. ಮೂರ್ತಿ ಸ್ವರ್ಣ ಗೆದ್ದರೆ, ಬೆಂಗಳೂರಿನವರೇ ಆದ ರೋಹಿತ್ ಶಂಕರ್ ಬೆಳ್ಳಿಗೆ ಭಾಜನರಾದರು. ಬೆಂಗಳೂರು ನಗರದ ಯು.ಎನ್. ರಾಮ್ ಕುಮಾರ್ ಮತ್ತು ಕಲಬುರಗಿಯ ಮಂಜುನಾಥ್ ಎಸ್.ಆರ್. ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಮಹಿಳಾ ಸಿಂಗಲ್ಸ್‌ನಲ್ಲಿಬೆಂಗಳೂರು ನಗರದ ಸಹನಾ ಎಚ್. ಮೂರ್ತಿ ಸ್ವರ್ಣ ಗೆದ್ದರು, ಬೆಂಗಳೂರು ನಗರದ ಕಾರುಣ ಜಿ. ಬೆಳ್ಳಿ, ದಕ್ಷಿಣ ಕನ್ನಡದ ಪ್ರೇಕ್ಷ ಕರ್ಕೆರ ಮತ್ತು ಬೆಂಗಳೂರು ನಗರದ ತೃಪ್ತಿ ಪ್ರವೀಣ್ ಪುರೋಹಿತ್ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.
ಕಯಾಕಿಂಗ್: ಬೆಂಗಳೂರು ನಗರ ತಂಡಕ್ಕೆ ಬಂಗಾರ
ಅಮಾನಿ ಕೆರೆಯಲ್ಲಿನಡೆದ ಕಯಾಕಿಂಗ್ ಡ್ರಾಗನ್ ಬೋಟ್ ಮಿಕ್ಸ್ ತಂಡ ವಿಭಾಗದಲ್ಲಿ ಬೆಂಗಳೂರು ನಗರ ತಂಡ (2:25:23 ಸೆ.) ಸ್ವರ್ಣ ಪದಕ ಗೆದ್ದುಕೊಂಡಿತು. ಬೆಂಗಳೂರು ಗ್ರಾಮಾಂತರ (2:34:09 ಸೆ.) ಬೆಳ್ಳಿ ಮತ್ತು ಚಿತ್ರದುರ್ಗ (2:38:06 ಸೆ.) ತಂಡ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡವು.
ಜುಡೋ: ಮನೋಜ್, ಯಾಕೂಬ್ ಬಂಗಾರದ ಬೇಟೆ
ಡಾ.ಜಿ. ಪರಮೇಶ್ವರ ಒಳಾಂಗಣ ಕ್ರೀಡಾಂಗಣದಲ್ಲಿನಡೆದ ಜುಡೋ ಸ್ಪರ್ಧೆಯ ಪುರುಷರ 81 ಕೆ.ಜಿ ವಿಭಾಗದಲ್ಲಿ ಬೆಂಗಳೂರು ನಗರದ ಮೊಹಮ್ಮದ್ ಯಾಕುಬ್ ಖಾನ್ ಚಿನ್ನದ ಪದಕ ಗೆದ್ದಿದ್ದಾರೆ.
ವಿಜಯಪುರದ ಸಂದೀಪ್ ರಮೇಶ್ ರಾಥೋಡ್ ಬೆಳ್ಳಿಗೆ ಕೊರಳೊಡ್ಡಿದರು. ಬೆಳಗಾವಿಯ ಪವನ್ ವಿಕಾಸ್ ವೈಂಗಡೆ ಹಾಗೂ ಮೈಸೂರಿನ ಜಯಸೂರ್ಯ ಎಸ್. ಕಂಚಿನ ಪದಕ ಪಡೆದರು.
ಪುರುಷರ ಮೈನಸ್ 90 ಕೆ.ಜಿ ವಿಭಾಗದಲ್ಲಿ ಬೆಂಗಳೂರಿನ ಆರ್. ಮನೋಜ್ ನಾಯ್ಡು, ಬೆಳಗಾವಿಯ ಬಿ.ಎಸ್. ರೋಹನ್ ಮೊದಲೆರಡು ಸ್ಥಾನ ಪಡೆದರು. ವಿಜಯಪುರದ ಅಭಿಷೇಕ್ ವಿ. ಕಾಳೆ ಹಾಗೂ ಕೆ. ತೌಸಿಫ್ ಕಂಚು ಗೆದ್ದರು.
ಪುರುಷರ ಮೈನಸ್ 100 ಕೆ.ಜಿ: ಬೆಂಗಳೂರಿನ ರವಿಚಂದ್ರ ಎಸ್., ವಿಜಯಪುರದ ಸಂದೀಪ್ ಪಿ. ಲಮಾಣಿ, ಬೆಳಗಾವಿಯ ಓಂಕಾರ್ ಮಿನಾಚೆ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದರು.
ಪುರುಷರ ಪ್ಲಸ್ 100 ಕೆ.ಜಿ: ಮೈಸೂರಿನ ವಿಕಾಸ್ ಕುಮಾರ್ ಎನ್., ಬೆಳಗಾವಿಯ ರಾಹುಲ್ ಲಂಕೆನ್ನವರ್ ಮೊದಲೆರಡು ಸ್ಥಾನ ಗಳಿಸಿದರು.
ಪುರುಷರ ಮೈನಸ್ 73 ಕೆ.ಜಿ: ಮಂಜುನಾಥ ಎಂ.ಎನ್. (ದಾವಣಗೆರೆ), ಚೇತನ್ ಎಲ್. ಕಟ್ಟಿನಬಾವಿ (ಬೆಳಗಾವಿ) ಮೊದಲೆರಡು ಸ್ಥಾನ ಗಳಿಸಿದರೆ, ದುರ್ಗೇಶ್ ಎಲ್. ಕುಂಚಿಕೊರಾಮ (ವಿಜಯಪುರ), ಹರೀಶ್ ಜಿ.ಎಸ್. (ಮೈಸೂರು) ಜಂಟಿ 3ನೇ ಸ್ಥಾನ ಪಡೆದರು.
ಪುರುಷರ ಮೈನಸ್ 60 ಕೆ.ಜಿ: ಅಶ್ರಫ್ ಜಾಫರ್(ಬೆಂಗಳೂರು), ಅಮರ್ ಸಾಕಿರ್ (ಮೈಸೂರು), ಮೊದಲೆರಡು ಸ್ಥಾನ. ವಿಕಾಸ್ ನಾಯಕ್ (ದಾವಣಗೆರೆ), ಸಚಿನ್ ಪವರ್ (ವಿಜಯಪುರ), ಜಂಟಿ 3ನೇ ಸ್ಥಾನ.
ಪುರುಷರ ಮೈನಸ್ 66 ಕೆ.ಜಿ: ಭರಮಪ್ಪ ಎಸ್. ದಳವಾಯಿ (ಬೆಂಗಳೂರು), ವಿಶ್ವನಾಥ ಎಲ್. (ವಿಜಯನಗರ) ಮೊದಲೆರಡು ಸ್ಥಾನ, ಆನಂದ್ ರಾಥೋಡ್ (ವಿಜಯಪುರ) ಮತ್ತು ಈರಪ್ಪ ಪಿ. ಹೊಸಳ್ಳಿ (ಬೆಳಗಾವಿ) ಜಂಟಿ ತೃತೀಯ ಸ್ಥಾನ.
ಮಹಿಳೆಯರ ಮೈನಸ್ 48 ಕೆ.ಜಿ: ಬೆಳಗಾವಿಯ ರಮ್ಯಾ ಎ. ಜಿರಾಲಿ, ದಾವಣಗೆರೆಯ ಎಸ….ಎಸ್. ಚೈತ್ರ, ವಿಜಯನಗರದ ಸಾಧಿಯಾ ಎ. ಕ್ರಮವಾಗಿ ಚಿನ್ನ, ಬೆಳ್ಳಿ, ಕಂಚು ಪಡೆದರು.
ಮಹಿಳೆಯರ ಮೈನಸ್ 52 ಕೆ.ಜಿ: ವಿಜಯಪುರದ ಆರತಿ ಎಸ್. ಸೊನ್ನಡ, ಶಿವಮೊಗ್ಗದ ಸ್ವಾತಿ ಬಾಯ್ ಮೊದಲೆರಡು ಸ್ಥಾನ. ವಿಜಯನಗರದ ಐಶ್ವರ್ಯ ಜಿ.ಆರ್. , ದಾವಣಗೆರೆಯ ಐಶ್ವರ್ಯ ಜಿ. ಜಂಟಿ 3ನೇ ಸ್ಥಾನ ಗಳಿಸಿದರು.
ಮಹಿಳೆಯರ ಮೈನಸ್ 57 ಕೆ.ಜಿ: ಶ್ರೀನಿಧಿ ವಿ.ಎಸ್. (ದಾವಣಗೆರೆ), ಲಕ್ಮೀ ಎನ್. (ವಿಜಯನಗರ), ಪೂರ್ವಿ ಎ.ಪಿ. (ಮಂಡ್ಯ) ಕ್ರಮವಾಗಿ ಚಿನ್ನ, ಬೆಳ್ಳಿ ಮತ್ತು ಕಂಚು ಗೆದ್ದರೆ,ಮಹಿಳೆಯರ ಮೈನಸ್ 70 ಕೆ.ಜಿ: ಅಕ್ಷ ತ ಟಿ. ಸುಂಕದ (ಬೆಳಗಾವಿ), ತನುಶ್ರೀ ವಿ. ಕಾಳೆ (ವಿಜಯಪುರ), ಜಯಲಕ್ಷಿ ್ಮ ಆರ್. (ಮೈಸೂರು) ಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿದರು.
ಬಾಸ್ಕೆಟ್‌ಬಾಲ್: ಬ್ಯಾಂಕ್ ಆಫ್ ಬರೋಡಾ ಶುಭಾರಂಭ
ಪುರುಷರ ಬಾಸ್ಕೆಟ್‌ಬಾಲ್ ಲೀಗ್ ಪಂದ್ಯದಲ್ಲಿ ಬ್ಯಾಂಕ್ ಆಫ್ ಬರೋಡಾ ತಂಡ ಬೀಗಲ್ಸ್ ವಿರುದ್ಧ 19 ಅಂಕಗಳಿಂದ ಭರ್ಜರಿ ಜಯ ಸಾಧಿಸಿ ಶುಭಾರಂಭ ಮಾಡಿತು. ಸಿದ್ದಾರ್ಥ ಮೆಡಿಕಲ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ಬ್ಯಾಂಕ್ ಆಫ್ ಬರೋಡ 67 ಅಂಕಗಳಿಸಿದರೆ, ಬೀಗಲ್ಸ್ 48 ಅಂಕ ಗಳಿಗೆ ಸೀಮಿತಗೊಂಡಿತು. ಮಧ್ಯಂತರದಲ್ಲಿ30-25 ಅಂಕಗಳಿಂದ ಮುನ್ನಡೆಯಲ್ಲಿದ್ದ ಬರೋಡಾ ತಂಡದ ಪರ ಸುಕೇಶ್ 14 ಹಾಗೂ ನಾಗರಾಜ್ 12 ಅಂಕಗಳಿಸಿದರು.
ಪುರುಷರ ವಿಭಾಗದಲ್ಲಿಜಿಎಸ್‌ಟಿ ಮತ್ತು ಕಸ್ಟಮ್ಸ್ ತಂಡ (66) ಎಂಎನ್‌ಕೆ ರಾವ್ ತಂಡವನ್ನು (53) 13 ಅಂಕಗಳಿಂದ ಸೋಲಿಸಿತು. ಯಂಗ್ ಒರಿಯನ್ಸ್ ತಂಡ (46) ಡಿವೈಇಎಸ್ ಬೆಂಗಳೂರು (28) ವಿರುದ್ಧ 18 ಅಂಕಗಳಿಂದ ಗೆದ್ದಿತು. ಭಾರತ್ ಸ್ಪೋರ್ಟ್ಸ್ ಯೂನಿಯನ್ ತಂಡ (50) ಸದರನ್ ಬ್ಲ್ಯೂಸ್ (40) ವಿರುದ್ಧ 10 ಅಂಕಗಳಿಂದ ಭರ್ಜರಿ ಜಯ ದಾಖಲಿಸಿದೆ.
ಮಹಿಳೆಯರ ವಿಭಾಗದಲ್ಲಿ ಡಿವೈಇಎಸ್ ಮೈಸೂರು ತಂಡ (53) ಡಿವೈಇಎಸ್ ವಿದ್ಯಾನಗರ ತಂಡವನ್ನ (48) 5 ಅಂಕಗಳಿಂದ ಮಣಿಸಿ ಮುನ್ನಡೆ ಸಾಧಿಸಿತು. ಮಂಡ್ಯ ತಂಡ (52) ಭಾರತ್ ಸ್ಪೋರ್ಟ್ಸ್ ಯೂನಿಯನ್ (28) ವಿರುದ್ಧ 24 ಅಂಕಗಳಿಂದ ಜಯ ಸಾಧಿಸಿದೆ.