×
Ad

ಕರ್ನಾಟಕ ಕ್ರೀಡಾಕೂಟಕ್ಕೆ ತೆರೆ: ಏಳು ದಿನಗಳ ಕ್ರೀಡಾಕೂಟದಲ್ಲಿ ಬೆಂಗಳೂರ ನಗರ ಸ್ಪರ್ಧಿಗಳು ಪ್ರಾಬಲ್ಯ

ಉದಯೋನ್ಮುಖ ಕ್ರೀಡಾಪಟುಗಳಿಗೆ ವೇದಿಕೆಯಾದ ಕ್ರೀಡಾಕೂಟ

Update: 2026-01-22 23:43 IST

ತುಮಕೂರು:ಕರ್ನಾಟಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಒಲಿಂಪಿಕ್ಸ್ ಸಂಸ್ಥೆ ಮತ್ತು ತುಮಕೂರು ಜಿಲ್ಲಾಡಳಿತದ ಆಶ್ರಯದಲ್ಲಿ ನಡೆದ ಕರ್ನಾಟಕ ಕ್ರೀಡಾಕೂಟ 2025-26 ಗುರುವಾರ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.

ಜನವರಿ 16ರಿಂದ ಜನವರಿ 22ರವರೆಗೆ ಏಳು ದಿನ ತುಮಕೂರು ಮತ್ತು ಬೆಂಗಳೂರಿನ ಆತಿಥ್ಯದಲ್ಲಿ ನಡೆದ ಕ್ರೀಡಾಕೂಟದಲ್ಲಿ 4500 ಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಂಡು ಕ್ರೀಡಾಕೂಟವನ್ನು ಯಶಸ್ವಿಗೊಳಿಸಿದ್ದಾರೆ.

ಪ್ರತಿಭಾನ್ವೇಷಣೆ ಹಾಗೂ ಪ್ರೋತ್ಸಾಹಕ್ಕೆ ಅತ್ಯುತ್ತಮ ವೇದಿಕೆಯಾಗಿರುವ ರಾಜ್ಯ ಕ್ರೀಡಾಕೂಟದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಪಾಲ್ಗೊಂಡು ಗಮನ ಸೆಳೆದಿದ್ದು, ಕೂಟದ ಯಶಸ್ಸಿಗೆ ಹಿಡಿದ ಕೈಗನ್ನಡಿಯಾಗಿದೆ. 27 ಕ್ರೀಡಾ ಸ್ಪರ್ಧೆಗಳ ಪೈಕಿ ಈಜು, ಹಾಕಿ ಮತ್ತು ರೈಫಲ್ ಶೂಟಿಂಗ್ ಸ್ಪರ್ಧೆಗಳಿಗೆ ಬೆಂಗಳೂರು ಆತಿಥ್ಯ ವಹಿಸಿದರೆ, ಉಳಿದ 24 ಕ್ರೀಡೆಗಳಿಗೆ ಕಲ್ಪತರ ನಾಡು ತುಮಕೂರು ವೇದಿಕೆ ಕಲ್ಪಿಸಿತು. ಬೆಂಗಳೂರು ನಗರದ ಸ್ಪರ್ಧಿಗಳು ಕೂಟದಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ.

ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಬೆಳಗಾವಿ, ಬೆಂಗಳೂರು ನಗರ, ತುಮಕೂರು, ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ, ಬೆಂಗಳೂರು ನಗರ, ಈಜು ಸ್ಪರ್ಧೆಯಲ್ಲಿ ಬೆಂಗಳೂರು ನಗರ, ಲಾನ್ ಟೆನಿಸ್ ನಲ್ಲಿ ಬೆಂಗಳೂರು ನಗರ, ಬಾಗಲಕೋಟೆ ಮತ್ತು ವಿಜಯಪುರ, ಫುಟ್ಬಾಲ್ ನಲ್ಲಿ ಬೆಳಗಾವಿ ಮತ್ತು ಮೈಸೂರು, ಕಬಡ್ಡಿಯಲ್ಲಿ ತುಮಕೂರು ಮತ್ತು ದಕ್ಷಿಣ ಕನ್ನಡ, ಫೆನ್ಸಿಂಗ್ ನಲ್ಲಿ ಬೆಂಗಳೂರು ನಗರ, ವಾಲಿಬಾಲ್ ನಲ್ಲಿ ಕರ್ನಾಟಕ ಪೊಲೀಸ್ ಮತ್ತು ಅಂಚೆ ಇಲಾಖೆ, ಶೂಟಿಂಗ್, ಜಿಮ್ನಾಸ್ಟಿಕ್ಸ್ ಮತ್ತು ಬ್ಯಾಡ್ಮಿಂಟನ್ ನಲ್ಲಿ ಬೆಂಗಳೂರು ನಗರ ಪ್ರಾಬಲ್ಯ ಸಾಧಿಸಿವೆ.

ಬಾಸ್ಕೆಟ್ ಬಾಲ್ ಸ್ಪರ್ಧೆಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಯಂಗ್ ಒರಿಯನ್ಸ್ ಮತ್ತು ಇದೇ ಸ್ಪರ್ಧೆ ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡ ಮೈಸೂರು ತಂಡದ ಆಟಗಾರರು ರಾಷ್ಟ್ರ ಮಟ್ಟದಲ್ಲಿ ಕೀರ್ತಿ ಪತಾಕೆಯನ್ನು ಹಾರಿಸುವ ಸಾಮಥ್ರ್ಯ ಹೊಂದಿದ್ದಾರೆ.ಕೂಟದಲ್ಲಿ ಹಲವಾರು ಪ್ರತಿಭಾನ್ವಿತಾ ಕ್ರೀಡಾಪಟಗಳು ಹೊರಹೊಮ್ಮಿದ್ದಾರೆ. ಅಂತರವನ್ನು ಗುರುತಿಸಿ, ಅವರ ಮುಂದಿನ ಕ್ರೀಡಾ ಭವಿಷ್ಯಕ್ಕೆ ಅಗತ್ಯ ಉತ್ತೇಜನ ನೀಡಲಾಗುತ್ತದೆ.2022ರಲ್ಲಿ ಯೂತ್ ಇಂಡಿಯಾ ತಂಡನ್ನು ಪ್ರತಿನಿಧಿಸಿದ್ದ ಕುಶಾಲ್ ಗೌಡ ಬಾಸ್ಕೆಟ್ ಬಾಲ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಬೆಂಗಳೂರಿನ ಬಸವನಗುಡಿ ಈಜು ಕೇಂದ್ರದ ಅನೀಶ್ ಅನಿರುದ್ಧ, ವಿಹಿತಾ ನಯನಾ ರಾಜ್ಯ ಕೂಟದಲ್ಲಿ ಮಿಂಚಿದ್ದಾರೆ.

ಸಬ್ ಜೂನಿಯರ್, ಜೂನಿಯರ್, ಯೂತ್ ನ್ಯಾಷನಲ್ಸ್, ಖೇಲೊ ಇಂಡಿಯಾ ಯೂತ್ ಗೇಮ್ಸ್, ನ್ಯಾಷನಲ್ಸ್ ಗೇಮ್ಸ್ ಸೇರಿದಂತ ರಾಷ್ಟ್ರಮಟ್ಟದ ಹಲವು ಸ್ಪರ್ಧೆಗಳಲ್ಲಿ ಪಾಲ್ಗೊಂಡಿರುವ ಯಶಸ್ವಿನಿ ಎಂ.ಕೆ ಬಾಸ್ಕೆಟ್ ಬಾಲ್ ಸ್ಪರ್ಧೆಯಲ್ಲಿ ಭವಿಷ್ಯದ ತಾರೆಯಾಗಿ ರೂಪುಗೊಂಡಿದ್ದಾರೆ.ಯೂತ್ ನ್ಯಾಷನಲ್ಸ್ ಮತ್ತು ಜೂನಿಯರ್ ನ್ಯಾಷನಲ್ಸ್ ನಲ್ಲಿ ಪೆÇೀಡಿಯಂ ಸ್ಥಾನ ಪಡೆದಿದ್ದ ರಕ್ಷಿತ್ ಶೆಟ್ಟಿ ಬಾಸ್ಕೆಟ್ ಬಾಲ್ ತಂಡದ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿದ್ದಾರೆ. 15 ಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ನೆಟ್ ಬಾಲ್ ಚಾಂಪಿಯನ್ ಷಿಪ್ ಗಳಲ್ಲಿ ಪಾಲ್ಗೊಂಡು ರಾಜ್ಯದ ಕೀರ್ತಿ ಬೆಳಗಿರುವ ಸುರಭಿ ಬಿ.ಆರ್. ರಾಜ್ಯ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಪ್ರಮುಖರಲ್ಲಿ ಒಬ್ಬರಾಗಿದ್ದಾರೆ.

ಬಾಸ್ಕೆಟ್ ಬಾಲ್ ಮಾತ್ರವಲ್ಲ, ಕಳೆದ ವರ್ಷ ಖೋ ಖೋ ವಿಶ್ವಕಪ್ ನಲ್ಲಿ ಪ್ರಶಸ್ತಿ ಗೆದ್ದ ಭಾರತ ತಂಡದ ಸದಸ್ಯೆಯಾಗಿರುವ ಚೈತ್ರಾ ಅವರು ಕೂಟದಲ್ಲಿ ಪಾಲ್ಗೊಂಡಿದ್ದು ಮತ್ತೊಂದು ವಿಶೇಷದ ಸಂಗತಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News