×
Ad

ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರಿಗೆ ಸನ್ಮಾನ

Update: 2025-08-10 17:26 IST

ಮಲ್ಪೆ, ಆ.10: ಬೋರ್ಡ್ ಆಫ್ ಇಸ್ಲಾಮಿಕ್ ಕರ್ನಾಟಕ ಮಲ್ಪೆ ಸೆಂಟರ್ ವತಿಯಿಂದ ಬೋರ್ಡ್ ಆಫ್ ಇಸ್ಲಾಮಿಕ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರಿಗೆ ಸನ್ಮಾನ ಸಮಾರಂಭವನ್ನು ಮಲ್ಪೆ ಎಎಫ್‌ಎಫ್‌ಎಸ್‌ನಲ್ಲಿ ಶನಿವಾರ ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಪಾಸಾದವರಿಗೆ ಬಹುಮಾನ ಮತ್ತು ಪಾಸಾದ ಎಲ್ಲರಿಗೂ ಸರ್ಟಿಫಿಕೆಟ್ ನೀಡಿ ಸನ್ಮಾನಿಸಲಾಯಿತು. ಕುರಾನ್ ಕಂಠಪಾಠ ಮಾಡಿದ ಮಲ್ಪೆಯ ಉಸ್ತಾದ್ ಅಕ್ಮಲ್ ಅವರನ್ನು ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಅಬ್ದುಲ್ ಹಸೀಬ್ ತರಫ್ದಾರ್ ಮತ್ತು ರೇಷ್ಮಾ ಬೈಲೂರು ಭಾಗವಹಿಸಿದ್ದರು. ಮುನಾವರ ಮಲ್ಪೆ ಸ್ವಾಗತಿಸಿದರು. ಶಬಾನ ಮಲ್ಪೆ ಕಾರ್ಯಕ್ರಮ ನಿರೂಪಿಸಿದರು. ಅಯ್ಫ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News