×
Ad

ಉಡುಪಿ: ಸಿಟಿ ಸೆಂಟರ್ ಮಾಲ್‌ನಲ್ಲಿ ಸ್ವಾತಂತ್ರ್ಯೋತ್ಸವ

ಚಿತ್ರಕಲಾ ಸ್ಪರ್ಧೆ, ಮಕ್ಕಳ ಫ್ಯಾಶನ್ ಶೋ, ರಸಪ್ರಶ್ನೆ ಸ್ಪರ್ಧೆ ಆಯೋಜನೆ

Update: 2025-08-12 19:23 IST

ಉಡುಪಿ, ಆ.12: ನಗರದ ಸಿಟಿ ಸೆಂಟರ್ ಮಾಲ್‌ನಲ್ಲಿ ಆಗಸ್ಟ್ 15ರಂದು ದೇಶದ 79ನೇ ಸ್ವಾತಂತ್ರ್ಯೋತ್ಸವವನ್ನು ಉತ್ಸಾಹ ಹಾಗೂ ಸಂಭ್ರಮದಿಂದ ಆಚರಿಸಲಾಗುವುದು ಎಂದು ಸಿಟಿ ಸೆಂಟರ್ ಮಾಲ್‌ನ ಮ್ಯಾನೇಜರ್ ರಾಧಾಕೃಷ್ಣ ಪ್ರಭು ತಿಳಿಸಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳಗ್ಗೆ 8:30 ಸಿಟಿ ಸೆಂಟರ್ ಮಾಲ್ ಬಿಲ್ಡಿಂಗ್‌ನಲ್ಲಿ ಧ್ವಜಾರೋಹಣ ನೆರವೇರಲಿದೆ. ಇದರಲ್ಲಿ ಉಡುಪಿ ನಗರಸಭೆಯ ಶಿರಿಬೀಡು ವಾರ್ಡ್ ಸದಸ್ಯ ಟಿ.ಜಿ. ಹೆಗ್ಡೆ, ಭಾರತ್ ಸ್ಕೌಟ್ ಮತ್ತು ಗೈಡ್ಸ್‌ನ ಮುಖ್ಯ ಆಯುಕ್ತ ಜಯಕರ್ ಶೆಟ್ಟಿ ಇಂದ್ರಾಳಿ, ಸಾಗರದ ಉದ್ಯಮಿ ಕೋಡಿ ಇಬ್ರಾಹಿಂ ಮೊಹಮ್ಮದ್, ಉದ್ಯಮಿಗಳಾದ ಉಡುಪಿಯ ಪುರುಷೋತ್ತಮ ಶೆಟ್ಟಿ, ಮಂಗಳೂರಿನ ಹನೀಫ್, ಕುಂದಾಪುರದ ನಿಶ್ಚಿಂತ್ ದಾಮೋದರ್ ಹಾಗೂ ಉಡುಪಿ ಜಾಮೀಯಾ ಮಸೀದಿಯ ಅಧ್ಯಕ್ಷ ರಿಯಾಝ್ ಉಪಸ್ಥಿತರಿರುವರು ಎಂದರು.

ಕಾರ್ಯಕ್ರಮದ ಅಂಗವಾಗಿ ದೇಶಭಕ್ತಿಗೀತೆ, ಸಾಂಸ್ಕೃತಿಕ ಹಾಗೂ ವಿವಿಧ ಮನೋರಂಜನಾ ಕಾರ್ಯಕ್ರಮಗಳೂ ನಡೆಯಲಿವೆ. ಅಪರಾಹ್ನ 3:00ಗಂಟೆಯ ಬಳಿಕ ಚಿತ್ರಕಲಾ ಸ್ಪರ್ಧೆ, ಮಕ್ಕಳಿಗಾಗಿ ಕಿಡ್ಸ್ ಫ್ಯಾಶನ್ ಶೋ, ರಸಪ್ರಶ್ನೆ ಸ್ಪರ್ಧೆ (ಕ್ವಿಝ್)ಗಳು ನಡೆಯಲಿವೆ. ವಿಜೇತರಿಗೆ ಬಹುಮಾನ ವಿತರಣೆಯೂ ನಡೆಯಲಿದೆ ಎಂದು ರಾಧಾಕೃಷ್ಣ ಪ್ರಭು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಇನ್ನೊಬ್ಬ ಮಾಲ್ ಮ್ಯಾನೇಜರ್ ಪ್ರದೀಪ್ ಮೂಲ್ಯ, ಈವೆಂಟ್ ಮ್ಯಾನೇಜರ್ ಸೈಯದ್ ಅನೀಝ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News