×
Ad

ಜಿನಿವಾ ಒಪ್ಪಂದದಲ್ಲಿ ಮಾನವೀಯ ತಳಹದಿ: ಪ್ರಭಾಕರ ಶರ್ಮ ಅಭಿಪ್ರಾಯ

ರೆಡ್‌ಕ್ರಾಸ್‌ನಿಂದ ಜಿನಿವಾ ಒಪ್ಪಂದ ದಿನಾಚರಣೆ

Update: 2025-08-12 20:49 IST

ಮಂಗಳೂರು, ಆ.12: ಯುದ್ಧ ಗಾಯಾಳುಗಳನ್ನು ಹಾಗೂ ಯುದ್ಧ ಕೈದಿಗಳನ್ನು ಮಾನವೀಯತೆಯ ತಳಹದಿಯಲ್ಲಿ ಕಾಪಾಡುವುದು ಎಲ್ಲ ರಾಷ್ಟ್ರಗಳ ಕರ್ತವ್ಯ. ಇಂತಹ ಮಹತ್ವದ ಉದ್ದೇಶವನ್ನು 1949ರ ಜಿನಿವಾ ಒಪ್ಪಂದ ಹೊಂದಿದೆ ಎಂದು ನಿವೃತ್ತ ಅಪರ ಜಿಲ್ಲಾಧಿಕಾರಿ ಎಸ್.ಎ.ಪ್ರಭಾಕರ ಶರ್ಮ ಹೇಳಿದ್ದಾರೆ.

ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ವತಿಯಿಂದ ರೆಡ್‌ಕ್ರಾಸ್ ಶತಮಾನೋತ್ಸವ ಕಟ್ಟಡದ ಪ್ರೇರಣಾ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿನಿವಾ ಒಪ್ಪಂದ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಜಿನಿವಾ ಒಪ್ಪಂದಗಳು ಯುದ್ಧದ ಸಮಯದಲ್ಲಿ ಮಾನವೀಯತೆಯನ್ನು ಕಾಪಾಡುವಲ್ಲಿ ಇಂದಿಗೂ ಪ್ರಮುಖ ಪಾತ್ರವಹಿಸುತ್ತಿದೆ ಎಂದರು. ರೆಡ್‌ಕ್ರಾಸ್ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಖಜಾಂಜಿ ಕೆ.ಮೋಹನ್ ಶೆಟ್ಟಿ, ನಿರ್ದೇಶಕರಾದ ಯತೀಶ್ ಬೈಕಂಪಾಡಿ, ಡಾ.ಸಚ್ಚಿದಾನಂದ ರೈ, ಗುರುದತ್ ನಾಯಕ್, ಪಿ.ಬಿ.ಹರೀಶ್ ರೈ ಉಪಸ್ಥಿತರಿದ್ದರು.

ಮಂಗಳೂರು ವಿ.ವಿ. ಯೂತ್ ರೆಡ್‌ಕ್ರಾಸ್ ನೋಡಲ್ ಅಧಿಕಾರಿ ಡಾ.ಗಾಯತ್ರಿ.ಎನ್ . ಪ್ರತಿಜ್ಞಾ ವಿಧಿ ಬೋಧಿಸಿ ದರು. ಜಿಲ್ಲಾ ಜಿಲ್ಲಾ ರೆಡ್‌ಕ್ರಾಸ್ ನಿರ್ದೇಶಕಿ ಡಾ.ಸುಮನಾ ಬೋಳಾರ್ ಕ್ವಿಝ್ ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲಾ ರೆಡ್‌ಕ್ರಾಸ್ ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ ಸ್ವಾಗತಿಸಿದರು. ಬೆಸೆಂಟ್ ಮಹಿಳಾ ಕಾಲೇಜಿನ ಯೂತ್ ರೆಡ್‌ಕ್ರಾಸ್ ಅಧಿಕಾರಿ ದೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.

*ಕ್ವಿಝ್ ಫಲಿತಾಂಶ :ಜಿನಿವಾ ಒಪ್ಪಂದ ದಿನಾಚರಣೆ ಅಂಗವಾಗಿ ಏರ್ಪಡಿಸಿದ ಕ್ವಿಝ್‌ನಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲ ತಂಡ ಪ್ರಥಮ, ಯೇನೆಪೊಯ ಫಾರ್ಮಸಿ ಕಾಲೇಜು ತಂಡ ದ್ವಿತೀಯ, ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಬಲ್ಮಠ ತಂಡ ಮತ್ತು ಎಸ್‌ಡಿಎಂ ಕಾಲೇಜು ಉಜಿರೆ ತಂಡ ತೃತೀಯ ಸ್ಥಾನ ಪಡೆದವು. ಮಂಗಳೂರು ವಿ.ವಿ. , ನಿಟ್ಟೆ ಪರಿಗಣಿತ ವಿ.ವಿ. ಹಾಗೂ ಯೇನೆಪೊಯ ವಿ.ವಿ. ವ್ಯಾಪ್ತಿಯ 25ಕ್ಕೂ ಅಧಿಕ ಕಾಲೇಜುಗಳು ಸ್ಪರ್ಧೆಯಲ್ಲಿ ಭಾಗವವಹಿಸಿದ್ದವು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News