ಗಣಪತಿಯ ಮರಳು ಶಿಲ್ಪಾ ಕಲಾಕೃತಿ ರಚನೆ
Update: 2025-08-25 20:39 IST
ಉಡುಪಿ, ಆ.25: ಗಣೇಶ ಚತುರ್ಥಿಯ ಅಂಗವಾಗಿ ನಾಡಿನ ಜನತೆಗೆ ಶುಭಾಷಯ ಸಾರುವ ಗಣಪತಿಯ ಮರಳು ಶಿಲ್ಪಾ ಕಲಾಕೃತಿಯನ್ನು ಕುಂದಾಪುರದ ಕೋಟೇಶ್ವರ ಹಳೆಅಳಿವೆ ಕಡಲ ತೀರದಲ್ಲಿ ರಚಿಸಲಾಯಿತು.
ಜೈ ಗಣೇಶ ಎಂಬ ಶೀರ್ಷಿಕೆಯೊಂದಿಗೆ 4 ಅಡಿ ಮತ್ತು 6 ಅಡಿ ಎತ್ತರ ಅಗಲಗಳುಳ್ಳ ಈ ಕಲಾಕೃತಿಯನ್ನು ಸ್ಯಾಂಡ್ ಥೀಂ ಉಡುಪಿ ತಂಡದ ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ ರಚಿಸಿದರು.