ಉಡುಪಿ ಜಿಲ್ಲೆಯ ಯೋಗ ಪಟುಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ
Update: 2025-08-26 18:42 IST
ಕಾರ್ಕಳ : ಯೋಗಾಸನ ಭಾರತ್ ಕೇಂದ್ರ ಸರಕಾರದ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಹಾಗೂ ಅಸ್ಮಿತೆ ಖೇಲೋ ಇಂಡಿಯಾ ಮಹಿಳಾ ಯೋಗಾಸನ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಯೋಗ ಪಟುಗಳು 15 ಚಿನ್ನ 10 ಬೆಳ್ಳಿ ಹಾಗೂ 7 ಕಂಚಿನ ಪದಕಗಳನ್ನು ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.
ಇವರ ಜೊತೆ ಕೆ ನರೇಂದ್ರ ಕಾಮತ್ ಕಾರ್ಕಳ, ರಾಘವೇಂದ್ರ ಭಟ್ ಉಡುಪಿ ಅಶೋಕ್ ಕುಮಾರ್ ಕಾರ್ಕಳ ಲತಾ ಮಧ್ಯಸ್ಥ ಕುಂದಾಪುರ ಮಮತಾ ಗಣೇಶ್ ಕಾರ್ಕಳ ಇವರು ತೀರ್ಪುಗರರಾಗಿ ಮತ್ತು ತಂಡ ವ್ಯವಸ್ಥಾಪಕರಾಗಿ ಭಾಗವಹಿಸಿದರು.
ಒಟ್ಟು 15 ಮಂದಿ ಯೋಗ ಪಟುಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.