ತೆಂಗಿನಕಾಯಿ ಗೆರಟೆಯಲ್ಲಿ ಮೂಡಿಬಂದ ಚೌತಿ ಗಣಪ!
ಉಡುಪಿ, ಆ.26: ನಾಡು ಚೌತಿ ಹಬ್ಬಕ್ಕೆ ಸಂಭ್ರಮದಿಂದ ಸಜ್ಜಾಗುತಿದ್ದರೆ, ಉಡುಪಿಯ ಕಲಾವಿದರೊಬ್ಬರು ತೆಂಗಿನಕಾಯಿ ಗೆರಟೆಯಲ್ಲಿ ಗಣಪತಿಯ ಕಲಾಕೃತಿಯನ್ನು ಮಾಡಿದ್ದಾರೆ.
ಕಲಾವಿದರಾದ ಶ್ರೀನಾಥ್ ಮಣಿಪಾಲ, ರವಿ ಹಿರೇಬೆಟ್ಟು ಹಾಗೂ ವೆಂಕಿ ಪಲಿಮಾರು ಇವರು ದಿನನಿತ್ಯ ತೆಂಗಿನ ಕಾಯಿ ಬಳಸಿ ಎಸೆಯುವ ಸುಮಾರು 500ರಷ್ಟು ಗೆರಟೆಯನ್ನು ಬಳಸಿಕೊಂಡು ಗಣಪತಿಯ ಸುಂದರ ಕಲಾಕೃತಿ ಯನ್ನು ರಚಿಸಿದ್ದಾರೆ. ಈ ಕಲಾಕೃತಿ ಸುಮಾರು 9 ಅಡಿ ಎತ್ತರವಿದೆ.
ಈ ವಿಶಿಷ್ಟವಾದ ಗೆರಟೆಕಾಯ ಗಣೇಶನನ್ನು ಉಡುಪಿಯ ಹೃದಯಭಾಗದಲ್ಲಿರುವ ಆಭರಣ ಮಳಿಗೆಯಲ್ಲಿ ಚೌತಿಯ ಅಂಗವಾಗಿ ಇರಿಸಿದ್ದು, ಇದನ್ನು ಸುಭಾಸ್ ಕಾಮತ್ ಹಾಗೂ ಮಹೇಶ್ ಕಾಮತ್ ಅನಾವರಣಗೊಳಿಸಿದರು.
ಇದೀಗ ಈ ಕಲಾಕೃತಿ ನೂರಾರು ನೋಡುಗರನ್ನು ತನ್ನತ್ತ ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಕಲಾಕೃತಿಯನ್ನು ಸುಮಾರು 10 ದಿನಗಳ ಕಾಲ ಸಾರ್ವಜನಿಕರ ಪ್ರದರ್ಶನಕ್ಕೆ ಇರಿಸಲಾಗುವುದು. ಶ್ರೀಕೃಷ್ಣ ಜನ್ಮಾಷ್ಟಮಿ ಯವರೆಗೂ ಇದು ಪ್ರದರ್ಶನಕ್ಕಿರುತ್ತದೆ ಎಂದು ಕಲಾವಿದರು ತಿಳಿಸಿದ್ದಾರೆ.