ಪಲಿಮಾರು: ‘ಅಸ್ವಿರಾತುಲ್ ಮುಸ್ತಕೀಮ್’ ಆದರ್ಶ ಸಮಾವೇಶ
ಪಡುಬಿದ್ರೆ, ಆ.26: ಅಲ್ಲಾಹನ ಸೃಷ್ಟಿಗಳಾದ ನಾವು ಆತ್ಮ ಪರಿಶುದ್ಧತೆಯೊಂದಿಗೆ ಜೀವಿಸಿ ನಮ್ಮ ಜೀವನವನ್ನು ಧನ್ಯಗೊಳಿಸುವುದ ರೊಂದಿಗೆ ಮನುಕುಲದ ಅಭ್ಯಾದಯಕ್ಕೆ ಶ್ರಮಿಸಬೇಕು ಎಂದು ಸಮಸ್ತ ಕೇಂದ್ರ ಮುಷಾವರ ಸದಸ್ಯ ಅಲ್‌ಹಾಜ್ ಕೆ.ಉಸ್ಮಾನ್ ಫೈಝಿ ಹೇಳಿದ್ದಾರೆ.
ಉಡುಪಿ ರೇಂಜ್ ಜಂ ಇಯ್ಯತುಲ್ ಮುಅಲ್ಲಿಮೀನ್ ಮತ್ತು ಮದ್ರಸ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ ವತಿಯಿಂದ ಇನ್ನಾ ಪಲಿಮಾರು ಮಸೀದಿ ವಠಾರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಅಸ್ವಿರಾತುಲ್ ಮುಸ್ತಕೀಮ್ ಎಂಬ ಆದರ್ಶ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಉಡುಪಿ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಫಾರೂಕ್ ಹನೀಫಿ ನಿಟ್ಟೆ ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ ಖಾದರ್ ಕುಕ್ಕಿಲ ಮುಖ್ಯ ಪ್ರಭಾಷಣ ನಡೆಸಿದರು. ಪಲಿಮಾರು ಖತೀಬ್ ಮೌಲಾನ ಇಬ್ರಾಹಿಂ ದಾರಿಮಿ ದುವಾ ನೆರವೇರಿಸಿದರು.
ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಅಬ್ದುಲ್ ರಹ್ಮಾನ್, ಕಾರ್ಯದರ್ಶಿ ಮೊದೀನ್ ರೆಂಜಾಳ, ಪಲಿಮಾರು ಜಮಾತ್ ಅಧ್ಯಕ್ಷ ಟಿ.ಉಮರಬ್ಬ ಉಪಾಧ್ಯಕ್ಷ ಎಂ.ಪಿ.ಮೊಯಿದಿನಬ್ಬ, ಖಜಾಂಚಿ ಎಂ.ಪಿ.ಶೇಖಬ್ಬ, ಎರ್ಮಾಳ್ ಮಸೀದಿ ಅಧ್ಯಕ್ಷ ಸುಲೈಮಾನ್ ಸುರಭಿ, ಅಬ್ಬಾಸ್ ಹಾಜಿ ಕಣ್ಣಂಗಾರ್, ಸಾಲಿಹ್ ಹೆಜಮಾಡಿ, ಪಣಿಯೂರು ಮಸೀದಿ ಅಧ್ಯಕ್ಷ ಶಫಿ ಅಹ್ಮದ್, ರೇಂಜ್ ವ್ಯಾಪ್ತಿಯ ವಿವಿಧ ಮಸೀದಿ, ಮದ್ರಸಗಳ ಧರ್ಮ ಗುರುಗಳು, ಆಡಳಿತ ಸಮಿತಿ ಪದಾಧಿಕಾರಿಗಳು, ಮದ್ರಸ ಅಧ್ಯಪಕರು ಉಪಸ್ಥಿತರಿದ್ದರು. ರೇಂಜ್ ಕಾರ್ಯದರ್ಶಿ ಇರ್ಫಾನ್ ಫೈಝಿ ಸ್ವಾಗತಿಸಿ ಶರೀಫ್ ಫೈಝಿ ವಂದಿಸಿದರು.