ಜಮೀಯತುಲ್ ಫಲಾಹ್ ಕುಂದಾಪುರ ಅಧ್ಯಕ್ಷರಾಗಿ ಅಬು ಮೊಹಮ್ಮದ್
ಅಬು ಮೊಹಮ್ಮದ್
ಕುಂದಾಪುರ, ಆ.29: ಜಮೀಯತುಲ್ ಫಲಾಹ್ ಕುಂದಾಪುರ ತಾಲೂಕು ಘಟಕದ ವಾರ್ಷಿಕ ಮಹಾಸಭೆ ಇತ್ತೀಚೆಗೆ ಕುಂದಾಪುರ ಜಾಮಿಯಾ ಮಸೀದಿಯ ಕಟ್ಟಡದಲ್ಲಿರುವ ಕಚೇರಿಯಲ್ಲಿ ನಡೆಯಿತು.
2025-27ನೇ ಸಾಲಿಗೆ ನೂತನ ಸಮಿತಿ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಅಬು ಮೊಹಮ್ಮದ್ ಮುಜಾವರ್, ಕಾರ್ಯದರ್ಶಿಯಾಗಿ ಅಬ್ದುಲ್ ಸಲಾಂ ಚಿತ್ತೂರು, ಕೋಶಾಧಿಕಾರಿಯಾಗಿ ಜಿ.ಪಿ.ಮೊಹಮ್ಮದ್ ಗುಲ್ವಾಡಿ ಅವಿರೋಧವಾಗಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಅಬ್ದುಲ್ ಹಮೀದ್ ಗಂಗೊಳ್ಳಿ, ಹಂಝ ಹೆಮ್ಮಾಡಿ, ಜೊತೆ ಕಾರ್ಯದರ್ಶಿಯಾಗಿ ಅಯೂಬ್ ಮಾಣಿಕೊಳಲು, ಸಂಘಟನಾ ಕಾರ್ಯದರ್ಶಿಯಾಗಿ ರಿಯಾಜ್ ಕೋಡಿ, ಪತ್ರಿಕಾ ಕಾರ್ಯದರ್ಶಿಯಾಗಿ ಸಯ್ಯದ್ ನಾಸೀರ್ ಕುಂದಾಪುರ ಅವರನ್ನು ಆಯ್ಕೆ ಮಾಡಲಾಯಿತು. ಒಟ್ಟು 21 ಜನ ಸದಸ್ಯರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.
ಕೇಂದ್ರ ಸಮಿತಿಯ ವೀಕ್ಷಕರಾಗಿ ಬ್ರಹ್ಮಾವರ ಘಟಕದ ಪ್ರತಿನಿಧಿ ಅಸ್ಲಾಂ ಹೈಕಾಡಿ ಹಾಗೂ ಬೈಂದೂರು ಘಟಕದ ಫಯಾಜ್ ಅಲಿ ಚುನಾವಣಾ ಪ್ರಕ್ರಿಯೆ ನಿರ್ವಹಿಸಿದರು. ಫಝಲ್ ಮೌಲಾನ ಕಿರಾಅತ್ ಪಠಿಸಿದರು. ಅಬ್ದುಲ್ ಸಲಾಂ ಚಿತ್ತೂರು ಸ್ವಾಗತಿಸಿದರು. ಮುಜಾವರ್ ಅಬು ಮಹಮ್ಮದ್ ವಂದಿಸಿದರು.