×
Ad

ನವಜೀವನ ಲೇ ಕೌನ್ಸಿಲರ್ ತರಬೇತಿ ಕಾರ್ಯಾಗಾರ ಸಮಾರೋಪ

Update: 2025-08-31 19:42 IST

ಉಡುಪಿ, ಆ.31: ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆ ದೊಡ್ಡಣಗುಡ್ಡೆ, ಕಮಲ್ ಎ.ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ ಮತ್ತು ಒನ್ ಗುಡ್ ಸ್ಟೆಪ್ ಇದರ ಜಂಟಿ ಆಶ್ರಯದಲ್ಲಿ ನವಜೀವನ ಲೇ ಕೌನ್ಸಿಲರ್‌ನ 6ನೇ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭವು ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯ ಕಮಲ್ ಎ.ಬಾಳಿಗಾ ಸಭಾಂಗಣದಲ್ಲಿ ರವಿವಾರ ನಡೆಯಿತು.

ಅಧ್ಯಕ್ಷತೆಯನ್ನು ಡಾ.ಎ.ವಿ.ಬಾಳಿಗ ಚಾರಿಟೀಸ್ ಮತ್ತು ಕಮಲ್ ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ ಇದರ ಟ್ರಸ್ಟಿ ಡಾ.ಆರ್.ವಿ.ಬಾಳಿಗಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಬ್ಯಾಂಕ್ ಅಧಿಕಾರಿ, ಲೇ ಪರ್ಸನ್ ಕೌನ್ಸಿಲರ್ ರಾಘವೇಂದ್ರ ರಾವ್ ಮಾತನಾಡಿದರು.

ವೇದಿಕೆಯಲ್ಲಿ ಆಸ್ಪತ್ರೆಯ ಮನೋ ವೈದ್ಯ ಡಾ.ವಿರೂಪಾಕ್ಷ ದೇವರಮನೆ, ಡಾ.ಮಾನಸ್ ಇ.ಆರ್. ಉಪಸ್ಥಿತರಿದ್ದರು. ನವಜೀವನ ಲೇ ಕೌನ್ಸಿಲರ್‌ನ ತರಬೇತಿ ಕಾರ್ಯಾಗಾರದ ಕೋರ್ಡಿನೇಟರ್ ಮತ್ತು ಆಸ್ಪತ್ರೆಯ ಆಡಳಿತ ಅಧಿಕಾರಿ ಸೌಜನ್ಯ ಶೆಟ್ಟಿ ಸ್ವಾಗತಿಸಿದರು. ದೀಪಶ್ರೀ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ನವಜೀವನ ಲೇ ಕೌನ್ಸಿಲರ್‌ನ 7ನೇ ಬ್ಯಾಚಿನ ತರಬೇತಿ ಕಾರ್ಯಗಾರವು ಅಕ್ಟೋಬರ್ ತಿಂಗಳಲ್ಲಿ ಆರಂಭಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News