×
Ad

ಉಡುಪಿ ಜನಸೇವಾ ಕ್ರೆಡಿಟ್ ಸೌಹಾರ್ದ ಸಹಕಾರಿ ವಾರ್ಷಿಕ ಮಹಾಸಭೆ

Update: 2025-09-06 20:41 IST

ಉಡುಪಿ, ಸೆ.6: ಉಡುಪಿ ಜನಸೇವಾ ಕ್ರೆಡಿಟ್ ಸೌಹಾರ್ದ ಸಹಕಾರಿ ಇದರ ವಾರ್ಷಿಕ ಮಹಾಸಭೆ ಮತ್ತು ಅಭಿನಂದನ ಕಾರ್ಯಕ್ರಮವು ಶನಿವಾರ ಹೂಡೆಯ ಸಾಲಿಹಾತ್ ಅಡಿಟೋರಿಯಮ್‌ನಲ್ಲಿ ಜರಗಿತು.

ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಅಝೀಝ್ ಉದ್ಯಾವರ ವಹಿಸಿದ್ದರು. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಮೊಗವೀರ ವಾರ್ಷಿಕ ವರದಿ ಮತ್ತು ಬಜೆಟ್ ಮಂಡಿಸಿದರು. ಈ ಸಂದರ್ಭ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ನೇಜಾರಿನ ಅಲ್ ಫುರ್ಕಾನ್ ವಿಶೇಷ ಮಕ್ಕಳ ಶಾಲೆಯ ಮುಖ್ಯಸ್ಥರ ಸೇವೆಯನ್ನು ಪರಿಗಣಿಸಿ ಸನ್ಮಾನಿಸಿ ಸೊಸೈಟಿಯ ವತಿಯಿಂದ ಗೌರವ ಧನ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಜನಸೇವಾ ಕ್ರೆಡಿಟ್ ಸೌ. ಸಹಕಾರಿಯ ನಿರ್ದೇಶಕರಾದ ಇರ್ಷಾದುಲ್ಲಾ ಆದಿಲ್, ಝಕ್ರಿಯಾ ಬೆಂಗ್ರೆ, ಶೆರಿನ್ ಅಬ್ದುಲ್ ಲತೀಫ್ ಉಪಸ್ಥಿತರಿದ್ದರು. ಯಾಸೀನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News