ಕಾರ್ಕಳ : ಜನಾಗ್ರಹ ಸಭೆಗೆ ಡಾ.ರಾಜೇಂದ್ರ ಕುಮಾರ್ ಚಾಲನೆ
ಕಾರ್ಕಳ : ಶ್ರೀಕ್ಷೇತ್ರ ಧರ್ಮಸ್ಥಳ ಅಭಿಮಾನಿಗಳ ವೇದಿಕೆ ಆಶ್ರಯದಲ್ಲಿ ಕಾರ್ಕಳದ ಕುಕ್ಕುಂದೂರು ಗ್ರಾಮ ಪಂಚಾಯತ್ ಮೈದಾನದಲ್ಲಿ ನಡೆಯುತ್ತಿರುವ ಜನಾಗ್ರಹ ಸಭೆಗೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು , ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ. ಬೆಂಗಳೂರು ಅಧ್ಯಕ್ಷರಾದ ಸಹಕಾರ ರತ್ನ ಡಾ। ಎಮ್. ಎನ್. ರಾಜೇಂದ್ರ ಕುಮಾರ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಮಾಜದಲ್ಲಿ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಲು ಪಕ್ಷಾತೀತವಾಗಿ ಹಾಗೂ ಜಾತ್ಯತೀತವಾಗಿ ಎಲ್ಲರೂ ಒಗ್ಗಟ್ಟಾಗಬೇಕು. ಧಾರ್ಮಿಕ ಕ್ಷೇತ್ರಗಳ ಮೇಲೆ ನಡೆಯುತ್ತಿರುವ ಅಪಪ್ರಚಾರ ಮತ್ತು ದಬ್ಬಾಳಿಕೆಗೆ ಈಗ ಅಂತ್ಯ ಬರಬೇಕಾಗಿದೆ” ಎಂದ ಅವರು ಸೆ. 14 ರಂದು ಸುಮಾರು 3,500 ಸಹಕಾರಿ ಕ್ಷೇತ್ರದ ದುರೀಣರೊಂದಿಗೆ ಬೃಹತ್ ವಾಹನ ದಂಡಿನೊಂದಿಗೆ ಧರ್ಮಸ್ಥಳಕ್ಕೆ ಪ್ರಯಾಣ ಕೈಗೊಳ್ಳಲಿದ್ದೇವೆ” ಎಂದು ತಿಳಿಸಿದರು.
ಜೈನಮಠ ಕಾರ್ಕಳದ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿಯವರು ಮಾತನಾಡಿ ಧರ್ಮಸ್ಥಳವು 800 ವರ್ಷಗಳ ಐತಿಹಾಸಿಕ ಪಾರಂಪರ್ಯವನ್ನು ಹೊಂದಿದೆ. ದುಷ್ಟಶಕ್ತಿಗಳಿಂದ ದೇಶಕ್ಕೆ ಇಂದು ಅತಂಕ ಉಂಟಾಗಿದೆ. ಸರ್ವಧರ್ಮಗಳಿಗೆ ಸಾಕ್ಷಿಯಾಗಿ, ಸಹಬಾಳ್ವೆಯ ಪ್ರತೀಕವಾಗಿ ಧರ್ಮಸ್ಥಳ ಬೆಳಗುತ್ತಿದೆ. ಆದರೆ ಧಾರ್ಮಿಕ ಕ್ಷೇತ್ರಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ರಾಜಕೀಯದ ಪ್ರಭಾವವೂ ಇಲ್ಲಿ ಅಡಗಿದೆ. ಈ ಸಂದರ್ಭದಲ್ಲಿ ನಾವು ಧರ್ಮಸ್ಥಳದ ಪರವಾಗಿ ದೃಢವಾಗಿ ನಿಲ್ಲುತ್ತೇವೆ ಎಂದರು.
ಕಾರ್ಕಳ ಶಾಸಕ ಸುನೀಲ್ ಕುಮಾರ್ ಮಾತನಾಡಿ, “ಹಿಂದೂ ಧಾರ್ಮಿಕ ಕ್ಷೇತ್ರಗಳ ಮೇಲೆ ನಡೆಯುತ್ತಿರುವ ಅಪಪ್ರಚಾರವು ಒಂದು ಗುಂಪಿನಿಂದ ಸಿದ್ಧಪಡಿಸಲ್ಪಟ್ಟ ಕುತಂತ್ರವಾಗಿದೆ. ಇದು ನಂಬಿಕೆಯನ್ನು ಕುಂದಿಸಿ ಅರಾಜಕತೆಯನ್ನು ಸೃಷ್ಟಿಸುವ ಕೆಲಸವಾಗಿದೆ. ಜಾತಿ–ಜಾತಿಗಳ ನಡುವೆ ಜಗಳ ಹುಟ್ಟಿಸುವುದರೊಂದಿಗೆ ವಿದೇಶಿ ಶಕ್ತಿಗಳ ಪಿತೂರಿಯೂ ಇದಕ್ಕೆ ಕಾರಣವಾಗಿದೆ. ಹೀಗೆ ಭಾವನೆಗಳನ್ನು ದುರ್ಬಲಗೊಳಿಸಿ ಹಿಂದೂಗಳ ಒಗ್ಗಟ್ಟನ್ನು ಮುರಿಯುವ ಪ್ರಯತ್ನ ನಡೆಯುತ್ತಿದೆ. ವೀರೇಂದ್ರ ಹೆಗ್ಗಡೆ ಅವರ ಸಮಾಜಮುಖಿ ಕಾರ್ಯಗಳಿಗೆ ಸಮಾಜವೇ ಪ್ರಮಾಣಪತ್ರ ನೀಡಿದೆ. ಇಲ್ಲಿ ಎಸ್‌ಐಟಿ ತನಿಖೆ ಮೂಲಕ ನೀಡುವ ಅಗತ್ಯವಿಲ್ಲ. ಧರ್ಮಸ್ಥಳದಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಸಮಾಜವನ್ನು ಬದಲಾವಣೆಗೆ ಪ್ರೇರೇಪಿಸುತ್ತಿವೆ. ಆದರೆ ಕೆಲ ಅರಾಜಕ ಶಕ್ತಿಗಳು ಅಪವಿತ್ರತೆ ಮತ್ತು ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿವೆ. ರಾಜ್ಯ ಸರ್ಕಾರ ಕೂಡಾ ಕೆಲ ಸಂದರ್ಭಗಳಲ್ಲಿ ನಗರ ನಕ್ಸಲರ ಕೈಗೊಂಬೆಯಂತಾಗಿದೆ” , “ವಿಧಾನಸಭೆಯಲ್ಲಿ ನಾನು ಹಿಂದುತ್ವದ ಪರವಾಗಿ, ಸಂಸ್ಕೃತಿಯ ರಕ್ಷಣೆಯ ಪರವಾಗಿ ಧ್ವನಿ ಎತ್ತಿದ್ದೇನೆ. ಇಂದಿನ ಪರಿಸ್ಥಿತಿಯಲ್ಲಿ ಸಜ್ಜನಿಕೆ ಬಿಟ್ಟು ರಸ್ತೆಗೆ ಇಳಿಯುವ ಅಗತ್ಯವಿದೆ. ಸಮಾಜದಲ್ಲಿ ಶಾಂತಿ ಹಾಗೂ ಸಂಸ್ಕೃತಿಯ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಬೇಕು” ಎಂದರು.
ಕರ್ನಾಟಕ ಆರ್ಯಾ ಈಡಿಗ ಮಹಾಸಂಸ್ಥಾನ ಸೋಲೂರು ಮಠದ ವಿಖ್ಯಾತಾನಂದ ಸ್ವಾಮಿಜಿ ಆಶೀರ್ವಚನ ನೀಡಿ ಮಾತನಾಡಿ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ವಿರುದ್ಧದ ನಿಮ್ಮ ಹೋರಾಟದಲ್ಲಿ ನಾವು ಸಹ ನಿಮ್ಮೊಂದಿಗಿದ್ದೇವೆ. ನಮ್ಮ ವೈಯಕ್ತಿಕ ಅಸ್ತಿತ್ವಕ್ಕೂ ಧಕ್ಕೆ ತರುವ ಕೆಲಸಗಳು ನಡೆಯುತ್ತಿವೆ. ಸಮಾಜವು ಬೇಗನೆ ಜಾಗೃತವಾಗಬೇಕು ಎಂದರು.
ಸಾಮಾಜಿಕ ಕಾರ್ಯಕರ್ತ ವಸಂತ ಗಿಳಿಯಾರು ಪ್ರಸ್ತಾವನೆ ಗೈದು ಸುಮಾರು 12ವರ್ಷಗಳಿಂದ ಸೌಜನ್ಯ ಪ್ರಕರಣವನ್ನು ಮಂಡಿಸಿಕೊಂಡು ಧಾರ್ಮಿಕ ಕೇಂದ್ರ ಹಾಗೂ ಹೆಗ್ಗಡೆಯವರ ವಿರುದ್ಧ ಅಪ್ಪರಚಾರ ನಡೆಯುತ್ತಿದೆ. ಜೈನರ ಮತ್ತು ಹಿಂದೂಗಳ ನಡುವೆ ಧರ್ಮಗಳ ನಡುವೆ ಬಿಕ್ಕಟ್ಟು ಹುಟ್ಟಿಸುವ ಕೆಲ ಅಧರ್ಮಿಯರು ನಡೆಸುತ್ತಿದ್ದಾರೆ. ವ್ಯವಸ್ಥಿತ ಸಂಚಿನ ವಿರುದ್ಧ ನಾವೆಲ್ಲ ಸೇರಿ ಹೋರಾಡಬೇಕಾಗಿದೆ ಎಂದರು.
ಶ್ರೀ ರಾಮಕೃಷ್ಣ ಆಶ್ರಮ, ಬೈಲೂರು ಮಠದ ಸ್ವಾಮಿ ಪ್ರಭೋದನಂದಜೀ ಮಹಾರಾಜ್, ಸ್ವಾಮಿ ವಿಭೂದನಂದ ಸ್ವಾಮಿ ಮಹಾರಾಜ್ ಉಪಸ್ಥಿತಿಯಲ್ಲಿ ಕಾರ್ಕಳದ ಉದ್ಯಮಿ ಬೋಳ ಪ್ರಭಾಕರ್ ಕಾಮತ್ ಅಧ್ಯಕ್ಷತೆ ವಹಿಸಿದ್ದರು.
ಹಿಂದೂ ಐಕ್ಯ ವೇದಿಕೆ ಕೇರಳ ರವೀಶ್ ತಂತ್ರಿ ಕುಂಟಾರು ದಿಕ್ಕೂಚಿ ಭಾಷಣ ಭಾಷಣ ಮಾಡಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸದಸ್ಯ, ಜಿಲ್ಲಾ ಜಾಗೃತಿ ವೇದಿಕೆ, ಉಡುಪಿ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಹಿರಿಯ ನ್ಯಾಯವಾದಿ ಎಮ್.ಕೆ. ವಿಜಯ್ ಕುಮಾರ್, ವಕೀಲರ ಸಂಘ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ, ಉದ್ಯಮಿ ಗಣಪತಿ ಹೆಗ್ಡೆ ಬೋರ್ಕಟ್ಟೆ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಕಾರ್ಕಳ ಭಾಸ್ಕರ ಕೋಟ್ಯಾನ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದೇಂದಬೆಟ್ಟು ಸಾಣೂರು ಆಡಳಿತ ಮೊಕೇಸರರು ರಾಮ ಭಟ್ ಸಾಣೂರು, ಜ್ಞಾನಸುಧಾ ಸಮೂಹ ಶಿಕ್ಷಣ ಸಂಸ್ಥೆ ಮತ್ತು ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ| ಸುಧಾಕರ ಶೆಟ್ಟಿ, ಶ್ರೀ ರಾಜೇಶ್ವರಿ ಶಿಕ್ಷಣ ಸಂಸ್ಥೆ ಸಾಣೂರು ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಖ್ಯಾತ ಪತ್ರಕರ್ತ ಜಿತೇಂದ್ರ ಕುಂದೇಶ್ವರ, ರಾಷ್ಟ್ರೀಯ ಮಹಿಳಾ ಆಯೋಗ ನವದೆಹಲಿ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್ ಸನಾತನ ಸಂಸ್ಥೆಯ ಅಶ್ವಿನಿ ನಾಯಕ್, ಪಡುತಿರುಪತಿ ಶ್ರೀ ವೆಂಕಟರಮಣ ದೇವಸ್ಥಾನ, ಆಡಳಿತ ಮೊಕ್ತೆಸರ ಜಯರಾಮ್ ಪ್ರಭು, ತುಳು ಕೂಟ ಗೋವಾ ಹಾಗೂ ಪಟ್ಲ ಪೌಂಡೇಶನ್ ಗೋವಾ ಅಧ್ಯಕ್ಷ ಗಣೇಶ್ ಶೆಟ್ಟಿ, ಶ್ರೀ ಉಮಾಮಹೇಶ್ವರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಅಡಪಾಡಿ ಪಳ್ಳಿ ಧರ್ಮದರ್ಶಿ ಪುಂಡಲೀಕ ನಾಯಕ್, ಪುರಸಭೆ ಕಾರ್ಕಳ ಅಧ್ಯಕ್ಷ ಯೋಗೀಶ ದೇವಾಡಿಗ, ಶ್ರೀ ಕಾಳಿಕಾಂಬ ದೇವಸ್ಥಾನ, ಕಾರ್ಕಳ ಅಧ್ಯಕ್ಷ ರಾಮಚಂದ್ರ ಆಚಾರ್,ರಾಜಾಪುರ ಸಾರಸ್ವತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಜೋಡುರಸ್ತೆ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು, ಬಿಲ್ಲವ ಸಮಾಜ ಸಂಘ, ಕಾರ್ಕಳ ಅಧ್ಯಕ್ಷ ಪ್ರಮಲ್ ಕುಮಾರ್, ವ್ಯವಸಾಯ ಸೇವಾ ಸಹಕಾರಿ ಸಂಘ, ಹಿರ್ಗಾನ ಅಧ್ಯಕ್ಷ, ಸಿರಿಯಣ್ಣ ಶೆಟ್ಟಿ, ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಕಣಜಾರು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿಕ್ರಂ ಹೆಗ್ಡೆ, ದ.ಕ. ಜಿಲ್ಲಾ ಹೆಗ್ಗಡೆ ಸಮಾಜ ಸೇವಾ ಸಂಘ ಮಾಜಿ ಅಧ್ಯಕ್ಷ ನಂದ ಕುಮಾರ್ ಹೆಗ್ಡೆ, ಕರ್ನಾಟಕ ಗೋ ರಕ್ಷಕ್ ಪ್ರಮುಖ್ ಸುನಿಲ್ ಕೆ. ಆರ್., ಹಿಂದೂ ಜಾಗರಣಾ ವೇದಿಕೆ ಪ್ರಾಂತ್ಯ ಸದಸ್ಯ ಮಹೇಶ್ ಶೆಣೈ, ತಾಲೂಕು ಪಂಚಾಯತ್ ಕಾರ್ಕಳ ಮಾಜಿ ಅಧ್ಯಕ್ಷ ಸುಂದರ್ ಬಿ.,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಉಗ್ಗಪ್ಪ ಪರವ ಕೆರ್ವಾಶೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೋವಿಂದ ಬಂಗೇರ, ನೀರೆ,ಆದಿಶಕ್ತಿ ದೇವಸ್ಥಾನ ಕೊಪ್ಪಲ, ಬಜಗೋಳಿ ಧರ್ಮದರ್ಶಿ ಸುಧಾಕರ ಸಾಲ್ಯಾನ್, ಉದ್ಯಮಿ ಉದಯ್ ಸಾಲ್ಯಾನ್, ಕುಲಾಲ್ ಸಮಾಜ ಸೇವಾ ಸಂಘ, ಅಧ್ಯಕ್ಷ ಕಾರ್ಕಳ ಹರಿಶ್ಚಂದ್ರ ಕುಲಾಲ್, ರಾಜ್ಯ ಮಲೆಕುಡಿಯ ಸಂಘ, ಕರ್ನಾಟಕ ಅಧ್ಯಕ್ಷ ಶ್ರೀಧರ್ ಗೌಡ, ಶ್ರೀ ಅಂಬಾಭವಾನಿ ದೇವಸ್ಥಾನ, ದುರ್ಗಾ ಮೊಕ್ತಸರ ಶಂಕರ ನಾಯ್ಕ ಕಾರ್ಯಕ್ರಮದ ಸಂಚಾಲಕರಾದ ಡಾ| ರವೀಂದ್ರ ಶೆಟ್ಟಿ, ಬಜಗೋಳಿ,ಉದಯ್ ಕುಮಾರ್ ಹೆಗ್ಡೆ, ಯರ್ಲಪಾಡಿ ಉಪಸ್ಥಿತರಿದ್ದರು.
ದಾಮೋದರ ಶರ್ಮ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು.