×
Ad

ಉಡುಪಿ ತುಳುಕೂಟ ಅಧ್ಯಕ್ಷರಾಗಿ ಜಯಕರ ಶೆಟ್ಟಿ ಇಂದ್ರಾಳಿ

Update: 2025-09-11 18:31 IST

ಉಡುಪಿ : ಉಡುಪಿ ತುಳುಕೂಟದ ಅಧ್ಯಕ್ಷರಾಗಿ ಜಯಕರ ಶೆಟ್ಟಿ ಇಂದ್ರಾಳಿ ಪುನರಾಯ್ಕೆಯಾದರು.

ಉಡುಪಿ ತುಳುಕೂಟದ ಗೌರವಾಧ್ಯಕ್ಷರಾಗಿ ಭಾಸ್ಕರಾನಂದ ಕುಮಾರ್, ಅಧ್ಯಕ್ಷರಾಗಿ ಜಯಕರ ಶೆಟ್ಟಿ ಇಂದ್ರಾಳಿ, ಉಪಾಧ್ಯಕ್ಷರುಗಳಾಗಿ ಭುವನಪ್ರಸಾದ್ ಹೆಗ್ಡೆ, ದಿವಾಕರ ಸನಿಲ್, ಶೋಭಾ ಶೆಟ್ಟಿ, ವಿ.ಕೆ.ಯಾದವ್, ಪ್ರಧಾನ ಕಾರ್ಯದರ್ಶಿಯಾಗಿ ಗಂಗಾಧರ್ ಕಿದಿಯೂರ್, ಜೊತೆ ಕಾರ್ಯದರ್ಶಿಯಾಗಿ ಜ್ಯೋತಿ ದೇವಾಡಿಗ, ಸಂತೋಷ್ ಕುಮಾರ್, ಮೋಹನ್ ಶೆಟ್ಟಿ ಮೂಡನಿಡಂಬೂರು, ಕೋಶಾಧಿಕಾರಿಯಾಗಿ ಚೈತನ್ಯ ಎಂ.ಜಿ., ಸಂಘಟನಾ ಕಾರ್ಯದರ್ಶಿಯಾಗಿ ಮನೋಹರ ಶೆಟ್ಟಿ ತೋನ್ಸೆ, ಉದಯ ಕುಮಾರ್ ತೆಂಕನಿಡಿಯೂರ್, ಶಿಲ್ಪಾ ಜೋಷಿ ಆಯ್ಕೆಯಾದರು.

ತುಳುಮಿನದನದ ಸಂಚಾಲಕರಾಗಿ ದಯಾನಂದ ಕೆ.ಕಪ್ಪೆಟ್ಟು, ಕೆಮ್ತೂರು ತುಳುನಾಟಕ ಪರ್ಬದ ಸಂಚಾಲಕರಾಗಿ ಪ್ರಭಾಕರ ಭಂಡಾರಿ, ನಿಟ್ಟೂರು ತುಳು ಭಾವಗೀತೆ ಸ್ಪರ್ಧೆಯ ಸಂಚಾಲಕರಾಗಿ ಜಯರಾಮ ಶೆಟ್ಟಿಗಾರ್ ಮಣಿಪಾಲ, ಪಣಿಯಾಡಿ ಕಾದಂಬರಿ ಪ್ರಶಸ್ತಿ ಸಂಚಾಲಕರಾಗಿ ಪ್ರಕಾಶ್ ಸುವರ್ಣ ಕಟಪಾಡಿ, ಮದರಂಗಿದ ರಂಗ್ ಲೇಸ್ ಸಂಚಾಲಕರಾಗಿ ಸುಕನ್ಯಾ ಶೇಖರ್, ಆಟಿದ ಲೇಸ್ ಸಂಚಾಲಕರಾಗಿ ವಂದನಾ ವಿಶ್ವನಾಥ್, ಆಟಿದ ಕಷಾಯದ ಸಂಚಾಲಕರಾಗಿ ವಿವೇಕಾನಂದ ಎನ್., ಸೋನದ ಸೇಸೇ ಲೇಸ್ ಸಂಚಾಲಕರಾಗಿ ಶೇಖರ ಕಲ್ಮಾಡಿ, ತುಳುವೆರೆ ಗೊಬ್ಬುಲುದ ಸಂಚಾಲಕರಾಗಿ ರತ್ನಾಕರ ಇಂದ್ರಾಳಿ, ಜೋಕ್ಲೆಗಾದ್ ತುಳು ಕಥೆ ಸಂಚಾಲಕರಾಗಿ ವಿದ್ಯಾ ಸರಸ್ವತಿ, ತುಳು ಪಠ್ಯದ ಸಂಚಾಲಕರಾಗಿ ವಿಶ್ವನಾಥ ಬಾಯರಿ, ಜೋಕ್ಷೆಗಾದ್ ತುಳುವ ನಡಕೆದ ಸಂಚಾಲಕರಾಗಿ ದಿನೇಶ್ ಶೆಟ್ಟಿಗಾರ್, ಪ್ರಚಾರ ಮಾಧ್ಯಮದ ಸಂಚಾಲಕರಾಗಿ ಯಶೋಧಾ ಕೇಶವ್ ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಯು.ಜಿ.ದೇವಾಡಿಗ, ರಶ್ಮಿ ಶೆಣೈ, ತಾರಾ ಉಮೇಶ್ ಆಚಾರ್ಯ, ಭಾರತಿ ಟಿ.ಕೆ., ಗಣೇಶ್ ಕೋಟ್ಯಾನ್, ತಾರಾ ಸತೀಶ್, ಪೂರ್ಣಿಮಾ, ಪ್ರಭಾವತಿ ವಿಶ್ವನಾಥ್, ರೂಪಶ್ರೀ, ಲಕ್ಷ್ಮೀಕಾಂತ್ ಬೆಸ್ತೂರ್, ವೀಣಾ ಶೆಟ್ಟಿ, ಉಷಾ ಸುವರ್ಣ, ರೇವತಿ ಆರ್.ಶೆಟ್ಟಿ, ಸರೋಜ ಯಶವಂತ್, ಸುಮಾಲಿನಿ ದಯಾನಂದ್, ಸುಜಾತಾ ಮೊಯಿಲಿ, ವಿಶ್ವನಾಥ್ ಶೆಣೈ, ಗೌರವ ಸಲಹೆಗಾರರಾಗಿ ಬನ್ನಂಜೆ ಬಾಬು ಅಮೀನ್, ಮುರಳೀಧರ್ ಉಪಾಧ್ಯಾಯ ಹಿರಿಯಡ್ಕ, ಡಾ.ಗಣನಾಥ ಎಕ್ಕಾರು, ರವಿ ಶಂಕರ ರೈ, ಎಸ್.ವಿ.ಭಟ್, ಎಸ್.ಎ.ಕೃಷ್ಣಯ್ಯ, ಮನೋರಮ ಶೆಟ್ಟಿ, ಶಾಂತರಾಮ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ ಆಯ್ಕೆಯಾದರು.

ಪತ್ರಕರ್ತ ಜನಾದರ್ನ್ ಕೊಡವೂರು ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News