×
Ad

ಪರ್ಕಳ: ಸಾಂಪ್ರದಾಯಿತ ಗೂಡುದೀಪ ತಯಾರಿ ತರಬೇತಿ

Update: 2025-09-11 20:13 IST

ಪರ್ಕಳ, ಸೆ.11: ಈಗಿನ ತಲೆಮಾರಿನ ಯುವಕರಿಗೆ ಸಾಂಪ್ರದಾಯಿಕ ಗೂಡುದೀಪ ರಚನೆ ಹಾಗೂ ತಯಾರಿಯ ಕುರಿತಂತೆ ಮಾಹಿತಿ ಹಾಗೂ ತರಬೇತಿ ನೀಡುವ ಕಾರ್ಯಾಗಾರವೊಂದು ಪರ್ಕಳದಲ್ಲಿ ನಡೆಯಲಿದೆ.

ಪರ್ಕಳದ ಹೂವಿನ ವ್ಯಾಪಾರಿಗಳಾದ ಅಣ್ಣಪ್ಪ ಕರ್ಕೇರ ಅವರು ಮುಂದಿನ ತಲೆಮಾರಿಗೆ ಸಾಂಪ್ರದಾಯಕ ಗೂಡು ದೀಪದ ರಚನೆಯ ಕುರಿತು ಉತ್ಸುಕರಾಗಿದ್ದು, ಸೆ.14ರಂದು ಅಪರಾಹ್ನ 2:00ರಿಂದ ಆಸಕ್ತರಿಗೆ ಸಾಂಪ್ರದಾಯಿಕ ಗೂಡುದೀಪ ರಚನೆಯ ಕುರಿತು ತಿಳಿಸಿಕೊಡಲಿದ್ದಾರೆ.

ಅಣ್ಣಪ್ಪ ಕರ್ಕೇರ ಅವರು ಅಷ್ಟ ಭುಜ, ಚತುರ್ಬುಜ ಮಂಟಪ, ಗೂಡು ದೀಪರಚನಾ ಕೌಶಲ್ಯವನ್ನು ಆಸಕ್ತರಿಗೆ ಉಚಿತವಾಗಿ ಕಲಿಸಿಕೊಡಲಿದ್ದಾರೆ. ಗೂಡು ದೀಪ ತುಳುನಾಡಿನಲ್ಲಿ ಸಾಂಪ್ರದಾಯಕ ಕಲೆಯಾಗಿದ್ದು, ಅದನ್ನು ಮುಂದಿನ ತಲೆಮಾರಿಗೆ ತಿಳಿಸಿಕೊಡಲು ನಾನು ಬಯಸಿದ್ದೇನೆ ಎಂದು ಅವರು ಹೇಳುತ್ತಾರೆ.

ಅದರಂತೆ ಸೆ.14 ರವಿವಾರ ಅಪರಾಹ್ನ 2 ಗಂಟೆಯಿಂದ ಉಚಿತ ತರಬೇತಿ ಪರ್ಕಳದಲ್ಲಿ ನಡೆಯಲಿದೆ. ಗೂಡುದೀಪ ತಯಾರಿಸಲು ಆಸಕ್ತಿ ಇರುವ ವಿದ್ಯಾರ್ಥಿಗಳು, ಸಾರ್ವಜನಿಕರು, ಗೂಡುದೀಪ ತಯಾರಿಗೆ ಬೇಕಾದ ವಸ್ತುಗಳನ್ನು ತಂದರೆ, ಉಚಿತವಾಗಿ ಸಾಂಪ್ರದಾಯಿಕ ಗೂಡುದೀಪ ತಯಾರಿಯನ್ನು ಹೇಳಿಕೊಡಲಾಗುವುದು. ಆಸಕ್ತರು, ಹೆಚ್ಚಿನ ಮಾಹಿತಿಗಾಗಿ ಸಾಮಾಜಿಕ ಕಾರ್ಯಕರ್ತ ಗಣೇಶ್‌ರಾಜ ಸರಳಬೆಟ್ಟು ಅವರನ್ನು (ಮೊಬೈಲ್: 9845690278) ಸಂಪರ್ಕಿಸುವಂತೆ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News