ಪಡುಬಿದ್ರಿ: ಜಪ್ತಿ ಮಾಡಿದ ಗಾಂಜಾ ನಾಶ ಪಡಿಸಿದ ಅಬಕಾರಿ ಇಲಾಖೆ
Update: 2025-09-11 20:37 IST
ಉಡುಪಿ, ಸೆ.11:ಅಬಕಾರಿ ಇಲಾಖೆ ಜಿಲ್ಲೆಯ ವಿವಿದೆಡೆಗಳಿಂದ ಒಟ್ಟು 9 ಪ್ರಕರಣಗಳಲ್ಲಿ ವಶಪಡಿಸಿಕೊಂಡ 2.794 ಕೆ.ಜಿ ಗಾಂಜಾವನ್ನು ಇಂದು ಪಡುಬಿದ್ರಿಯ ನಂದಿಕೂರು ಕೈಗಾರಿಕಾ ಪ್ರದೇಶದ ಮೆ.ಆಯುಷ್ ಎನ್ವಿರೋಟಿಕ ಪ್ರೈ.ಲಿ ಜೀವ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಡ್ರಗ್ ಡಿಸ್ಪೋಸಲ್ ಸಮಿತಿಯ ಸಮಕ್ಷಮದಲ್ಲಿ, ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ನಾಶಪಡಿಸಲಾಯಿತು.
ಈ ಸಂದರ್ಭದಲ್ಲಿ ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ ಬಾಲಕೃಷ್ಣ ಸಿ.ಹೆಚ್, ಉಡುಪಿಯ ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ಪಿ, ಮಂಗಳೂರು ಅಬಕಾರಿ ಉಪ ಆಯುಕ್ತ ಟಿ.ಎಂ.ಶ್ರೀನಿವಾಸ್, ಉಡುಪಿ ಕಚೇರಿಯ ಅಬಕಾರಿ ಅಧೀಕ್ಷಕ ಅಶೋಕ್ ಹೆಚ್, ಮೆ.ಆಯುಷ್ ಎನ್ವಿರೋಟಿಕ ಪ್ರೈ.ಲಿನ ಮಾರ್ಕೆಟಿಂಗ್ ಮ್ಯಾನೇಜರ್ ಸತೀಶ್ ನಾಯಕ್, ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.