ಹೂಡೆ ಸಾಲಿಹಾತ್‌ನಲ್ಲಿ ಪ್ರಥಮ ಚಿಕಿತ್ಸೆ ಕಾರ್ಯಗಾರ
Update: 2025-09-11 20:52 IST
ಉಡುಪಿ, ಸೆ.11: ತೋನ್ಸೆ-ಹೂಡೆಯ ಸಾಲಿಹಾತ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ರೆಡ್‌ಕ್ರಾಸ್ ಘಟಕದ ವತಿಯಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ ಕಾರ್ಯಗಾರ ಇತ್ತೀಚೆಗೆ ನಡೆಯಿತು.
ಎಚ್‌ಆರ್‌ಎಸ್ ಉಡುಪಿ ಜಿಲ್ಲೆಯ ಸ್ವಯಂ ಸೇವಕರು ಈ ಕಾರ್ಯಗಾರ ನಡೆಸಿಕೊಟ್ಟರು. ಎಚ್‌ಆರ್‌ಎಸ್‌ನ ಕೋಸ್ಟಲ್ ರೀಜನ್ ವೈಸ್ ಕ್ಯಾಪ್ಟನ್ ಹಾಗೂ ತರಬೇತುದಾರ ಸಲಿಂ ಪ್ರಥಮ ಚಿಕಿತ್ಸೆಯ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕೆಲವೊಂದು ಪ್ರಾತ್ಯಕ್ಷಿಕೆ ನಡೆಸಲಾಯಿತು.
ವೇದಿಕೆಯಲ್ಲಿ ಎಚ್‌ಆರ್‌ಎಸ್‌ನ ಜಿಲ್ಲಾ ಸಂಚಾಲಕ ಬಿಲಾಲ್ ಮಲ್ಪೆ, ತರಬೇತುದಾರ ಜುಬೆರ್, ಆಡಳಿತಾಧಿಕಾರಿ ಅಸ್ಲಾಂ ಹೈಕಾಡಿ, ಪ್ರಾಂಶುಪಾಲೆ ಡಾ.ಸಬೀನಾ ಮುಂತಾದವರು ಉಪಸ್ಥಿತರಿದ್ದರು. ಸಾನಿಯ ಸ್ವಾಗತಿಸಿದರು. ಅನ್ಶಾಝ್ ಪ್ರಾರ್ಥಿಸಿದರು. ನೂರಿ ಆಲಿಯ ವಂದಿಸಿದರು.