×
Ad

ವಿಶ್ವದಾಖಲೆ ಭರತನಾಟ್ಯ ಕಲಾವಿದೆ ದಿಕ್ಷಾ ಬ್ರಹ್ಮಾವರಗೆ ಸನ್ಮಾನ

Update: 2025-09-13 19:30 IST

ಕೋಟ, ಸೆ.13: ಜೀವನದಲ್ಲಿ ಸಾಧನೆಗೆ ಗಳಿಸಬೇಕಾದೆರೆ ಗುರಿ ಇರಬೇಕು. ಆಗ ಮಾತ್ರ ಯಶಸ್ಸು ತಮ್ಮತ್ತ ಮುಖ ಮಾಡಲು ಸಾಧ್ಯ. ಪ್ರತಿಯೊಬ್ಬರಲ್ಲೂ ಕಲೆ ಇರುತ್ತದೆ. ಅದು ಹೊರಸೂಸಲು ಪೋಷಕರ ಪ್ರೋತ್ಸಾಹ ಅತ್ಯಗತ್ಯ ಎಂದು ಭರತನಾಟ್ಯದಲ್ಲಿ ವಿಶ್ವದಾಖಲೆ ಬರೆದ ಕಲಾವಿದೆ ವಿದೂಷಿ ದಿಕ್ಷಾ ಬ್ರಹ್ಮಾವರ ಹೇಳಿದ್ದಾರೆ.

ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ವತಿಯಿಂದ ಶನಿವಾರ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತಿದ್ದರು.

ಈ ಸಂದರ್ಭದಲ್ಲಿ ದಿಕ್ಷಾ ಬ್ರಹ್ಮಾವರ ಅವರನ್ನು ಕೋಟದ ಅಮೃತೇಶ್ವರೀ ದೇಗುಲದ ಟ್ರಸ್ಟಿಗಳಾದ ಸುಭಾಷ್ ಶೆಟ್ಟಿ ಮತ್ತು ಗಣೇಶ್ ನೆಲ್ಲಿಬೆಟ್ಟು ಸನ್ಮಾನಿಸಿದರು. ದಿಕ್ಷಾ ಅವರ ಪತಿ ರಾಹುಲ್, ಪಂಚವರ್ಣದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ, ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಕೋಟ ಗ್ರಾಪಂ ಮಾಜಿ ಸದಸ್ಯ ರವೀಂದ್ರ ಜೋಗಿ, ಪಂಚವರ್ಣ ಉಪಾಧ್ಯಕ್ಷ ದಿನೇಶ್ ಆಚಾರ್ಯ, ಜೆಸಿಐ ಸಿನಿಯರ್ ಲಿಜನ್ ಕೋಟ ಅಧ್ಯಕ್ಷ ಕೇಶವ ಆಚಾರ್ಯ, ಪಂಚವರ್ಣದ ಮಾಜಿ ಅಧ್ಯಕ್ಷ ಅಜಿತ್ ಆಚಾರ್ಯ, ಗಿರೀಶ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News