×
Ad

ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ‘ಅಷ್ಟಮಿ ಟ್ರೋಫಿ’

Update: 2025-09-15 20:24 IST

ಉಡುಪಿ, ಸೆ.15: ಅಜ್ಜರಕಾಡು ಬ್ಯಾಡ್ಮಿಂಟನ್ ಕ್ಲಬ್ ಮಾರ್ನಿಂಗ್ ಶೆಟ್ಟಲ್ ಫ್ರೆಂಡ್ಸ್ ಇವರ ಆಶ್ರಯದಲ್ಲಿ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ‘ಅಷ್ಟಮಿ ಟ್ರೋಫಿ- 2025’ ಶನಿವಾರ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉಡುಪಿ ಶಾಸಕ ಯಶಪಾಲ್ ಸುವರ್ಣ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಅಜ್ಜರಕಾಡು ಬ್ಯಾಡ್ಮಿಂಟನ್ ಕ್ಲಬ್ ಮಾರ್ನಿಂಗ್ ಶೆಟಲ್ ಫ್ರೆಂಡ್ಸ್ ಅಧ್ಯಕ್ಷ ಗಣೇಶ್ ಕುಮಾರ್ ಮಟ್ಟು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಪ್ರಸಾದ್‌ರಾಜ್ ಕಾಂಚನ್, ಉಡುಪಿ ಲೊಕಾಯುಕ್ತ ಪೊಲೀಸ್ ನಿರೀಕ್ಷಕ ರಾಜೇಂದ್ರ ನಾಯಕ್, ಉಡುಪಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಮಂಗಳೂರು ಸರಕಾರಿ ಅಭಿಯೋಜಕ ಬದ್ರಿನಾಥ ನಾಯಿರಿ, ನಗರಸಭಾ ಸದಸ್ಯ ಹರೀಶ್ ಶೆಟ್ಟಿ, ಜೇಸ್ಮಾ ಬ್ಯಾಡ್ಮಿಂಟನ್ ಅಕಾಡೆಮಿಯ ಗುರುರಾಜ್ ಸಾಲಿಯನ್, ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಸಂಘದ ಕಾಶಿರಾಮ್ ಪೈ, ಕೋಚ್ ಶಾಲಿನಿ ಶೆಟ್ಟಿ, ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭ: ಪಂದ್ಯಾಟದಲ್ಲಿ ನಾಗೇಂದ್ರ ಮಾಲಕತ್ವದ ಕೃಷ್ಣ ಕಿಂಗ್ಸ್ ವಿನ್ನರ್ಸ್‌, ದಿವಾ ನಂಬಿಯಾರ್ ಮಾಲಕತ್ವದ ವಿಕ್ಟೋರಿಯಾ ವೃಂದಾವನ್ ಒಂದನೇ ರನ್ನರ್ಸ್‌ ಹಾಗೂ ನಂದಕಿಶೋರ್ ಮಾಲಕತ್ವದ ಮಥುರಾ ಮಾಸ್ಟರ್ಸ್‌ ಎರಡನೇ ರನ್ನರ್ಸ್‌ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಉಡುಪಿ ಜಿಪಂ ಮುಖ್ಯ ಯೋಜನಾಧಿಕಾರಿ ಉದಯ ಕುಮಾರ್ ಶೆಟ್ಟಿ, ಕಾರ್ಕಳ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್., ಮಂಗಳೂರು ಸಿಐಡಿ ಪೊಲೀಸ್ ನಿರೀಕ್ಷ ರಾಘವೇಂದ್ರ ಸಿ., ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ನಿವೃತ್ತ ಪ್ರಾಧ್ಯಾಪಕ ಬಿ.ಎಂ.ಹೆಗ್ಡೆ, ಬ್ಯಾಂಕ್ ಆಫ್ ಬರೋಡ ಅಧಿಕಾರಿ ವಿದ್ಯಾಧರ ಶೆಟ್ಟಿ, ರಾಜೇಶ್ ಕರ್ಕೇರ, ಸಾಗರ್ ಶೆಟ್ಟಿ, ಸೋಹೆಲ್ ಅಮೀನ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಟಲ್ ಬ್ಯಾಡ್ಮಿಂಟನ್ ರಾಷ್ಟ್ರೀಯ ಕ್ರೀಡಾಪಟು ರಾಮದಾಸ್ ನಾಯಕ್ ಹಾಗೂ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದ ವ್ಯವಸ್ಥಾಪಕ ಶೇಖರ್ ಅಮೀನ್ ಅವರನ್ನು ಸನ್ಮಾನಿಸಲಾಯಿತು. ಗಣೇಶ್ ಕುಮಾರ್ ಮಟ್ಟು ಸ್ವಾಗತಿಸಿದರು. ಅಮಿತ್ ವಂದಿಸಿದರು. ನಂದಕಿಶೋರ್ ಕೆಮ್ಮಣ್ಣು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News