ವಕ್ವಾಡಿ: ಕ್ರೀಡಾಕೂಟದ ಲೋಗೋ ಅನಾವರಣ
Update: 2025-09-24 17:25 IST
ಕುಂದಾಪುರ, ಸೆ.24: ತಾಲೂಕಿನ ವಕ್ವಾಡಿಯ ಸರಕಾರಿ ಪ್ರೌಢಶಾಲೆಯಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ನಡೆಸಲು ಉದ್ದೇಶಿಸಲಾದ ಕುಂದಾಪುರ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದ ಲೋಗೋವನ್ನು ಉತ್ತರ ಕನ್ನಡದ ಹೊನ್ನಾವರ ಶ್ರೀದೇವಿ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಚಂದ್ರಶೇಖರ್ ಶೆಟ್ಟಿ ಅನಾವಾರಣಗೊಳಿಸಿದರು.
ತಾಲೂಕು ಕ್ರೀಡಾ ಕೂಟ ಸಮಿತಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಸಣಗಲ್ಲು ಮನೆ ವಕ್ವಾಡಿ, ವಕ್ವಾಡಿ ಸರಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಕುಸುಮಾಕರ್ ಶೆಟ್ಟಿ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಬಾಲಕೃಷ್ಣ ಶೆಟ್ಟಿ, ಪ್ರಮುಖರಾದ ವಿ.ಕೆ.ಶೆಟ್ಟಿ, ದೀಪಕ್ ಶೆಟ್ಟಿ ವಕ್ವಾಡಿ ಮೊದಲಾದವರಿದ್ದರು.