×
Ad

ಕಾರ್ಕಳ | ಉದ್ಯಮಿಯಿಂದ ಯುವಕನಿಗೆ ಹಲ್ಲೆ, ಜೀವಬೆದರಿಕೆ: ಪ್ರಕರಣ ದಾಖಲು

Update: 2025-09-26 15:24 IST

ಕಾರ್ಕಳ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವ ಯುವಕನಿಗೆ ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿರುವ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿರ್ಗಾನದ ಯಶವಂತ ನಾಯಕ್ ಹಲ್ಲೆಗೊಳಗಾದ ಯುವಕ. ಹಿರ್ಗಾನದ ಉದ್ಯಮಿ ಹಿರ್ಗಾನ ಲಕ್ಷ್ಮಿಪುರ ಆದಿಶಕ್ತಿ ಮಹಾಲಕ್ಷ್ಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ನಾಯಕ್ ಹಲ್ಲೆ ಆರೋಪಿಯಾಗಿದ್ದಾರೆ.

ಹಿರ್ಗಾನ ಗ್ರಾಮದ ಮೂರೂರು ಎಂಬಲ್ಲಿರುವ ದುರ್ಗಾ ವೆಜೆಟೇಬಲ್ ಅಂಗಡಿ ಬಳಿ ಸ್ನೇಹಿತರ ಜೊತೆ ಮಾತನಾಡುತ್ತಾ ನಿಂತಿದ್ದ ವೇಳೆ ಆಗಮಿಸಿದ ಅಶೋಕ್ ನಾಯಕ್, 'ತನ್ನ ಬಗ್ಗೆ ವಾಟ್ಸ್ ಆ್ಯಪ್ ನಲ್ಲಿ ಮಾನಹಾನಿ ಪೋಸ್ಟ್ ಹಾಕುತ್ತಿಯ?' ಎಂದು ಪ್ರಶ್ನಿಸಿ ಕೆನ್ನೆಗೆ ಹೊಡೆದಿದ್ದಾರೆ. ಅಲ್ಲದೇ, ಜೀವಬೆದರಿಕೆ ಹಾಕಿದ್ದಾರೆ ಎಂದು ಯಶವಂತ್ ನಾಯಕ್ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕಾರ್ಕಳ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News