×
Ad

ಆಟಿಸಂ ಮಕ್ಕಳ ಪೋಷಕರ ಸ್ವಸಹಾಯ ಗುಂಪಿನ ಸಭೆ

Update: 2025-09-27 19:34 IST

ಉಡುಪಿ, ಸೆ.27: ಆಟಿಸಂ ಸೊಸೈಟಿ ಆಫ್ ಉಡುಪಿ, ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ಮತ್ತು ಕಮಲ್ ಎ.ಬಾಳಿಗಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಟಿಸಂ ಮಕ್ಕಳ ಪೋಷಕರ ಸ್ವಸಹಾಯ ಗುಂಪು - ಸಂವೇದದ ಪೋಷಕರಿಗೆ 14ನೇ ಮಾಸಿಕ ಸಭೆ ಇಂದು ನಡೆಯಿತು.

ಉಡುಪಿಯ ಶಾಲಾ ಪೂರ್ವ ತಯಾರಿ ಕೇಂದ್ರದ ಮೇಲ್ವಿಚಾರಕಿ ದೀಕ್ಷಿತ, ನಿಧಾನಗತಿಯ ಮಕ್ಕಳ ಬೆಳವಣಿಗೆಯಲ್ಲಿ ಫಿಸಿಯೋಥೆರಪಿಯ ಪ್ರಾಮುಖ್ಯತೆ ತಿಳಿಸಿದರು. ಇಂಗ್ಲೆಂಡ್‌ನಲ್ಲಿ ಮಕ್ಕಳ ಬೆಳವಣಿಗೆಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಧರ್ಮಶೇಖರ್ ಪಾಟೀಲ್, ಆಟಿಸಂ ಪಾಲನೆಯ ಸಂಶೋಧನೆಗಳ ಕುರಿತು ಮಾಹಿತಿ ನೀಡಿದರು.

ಆಟಿಸಂ ಸೊಸೈಟಿ ಆಫ್ ಉಡುಪಿ ಅಧ್ಯಕ್ಷ ಡಾ.ವಿರೂಪಾಕ್ಷ ದೇವರಮನೆ, ಸಂವೇದ ಗುಂಪಿನ ಅಧ್ಯಕ್ಷ ವಿಠ್ಠಲ ಭಕ್ತ, ಪ್ರೋಗ್ರಾಂ ಮೇನೇಜರ್ ಕೀರ್ತೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News