×
Ad

ರಿತನ್ಯ ಎಸ್.ಆಚಾರ್ಯಗೆ ಸೂಪರ್ ಟ್ಯಾಲೆಂಟೆಡ್ ಕಿಡ್ ಬಿರುದು

Update: 2025-09-27 21:42 IST

ಉಡುಪಿ, ಸೆ.27: ಉಡುಪಿ ಜಿಲ್ಲೆಯ ಕಮಲಶಿಲೆ ಸುಧಾಕರ ಆಚಾರ್ಯ ಹಾಗೂ ಸುಚೇತಾ ದಂಪತಿಯ ಮಗಳು ರಿತನ್ಯ ಎಸ್. ಆಚಾರ್ಯ (1 ವರ್ಷ 4 ತಿಂಗಳು) ತನ್ನ ಅಪರೂಪದ ಪ್ರತಿಭೆಯಿಂದ ಇಂಟರ್‌ನೇಷನಲ್ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ ಸೂಪರ್ ಟ್ಯಾಲೆಂಟೆಡ್ ಕಿಡ್ ಎಂಬ ಬಿರುದನ್ನು ಪಡೆದು ‘ಒನ್ ಇನ್ ಎ ಮಿಲಿಯನ್’ ಗೌರವ ಪಡೆದಿದ್ದಾಳೆ.

ರಿತನ್ಯ 21 ಪಕ್ಷಿಗಳು, 28 ಪ್ರಾಣಿಗಳು, 15 ದೇಹಭಾಗಗಳು, 20 ಹಣ್ಣುಗಳು, 10 ಜಲಚರ ಪ್ರಾಣಿಗಳು, 6 ಕೀಟಗಳು, 23 ತರಕಾರಿಗಳು, 65ಕ್ಕೂ ಹೆಚ್ಚು ಗೃಹೋಪಯೋಗಿ ವಸ್ತುಗಳನ್ನು ಗುರುತಿಸುವ ಸಾಮರ್ಥ್ಯ ತೋರಿ ದಷ್ಟೇ ಅಲ್ಲದೆ, 30 ವಸ್ತುಗಳನ್ನು ಹುಡುಕಿ ತರುವುದು, ಹೇಳಿದ ಆಜ್ಞೆಗಳನ್ನು ಪಾಲನೆ ಮಾಡುವುದು, 8ಕ್ಕೂ ಹೆಚ್ಚು ಸಾಕುಪ್ರಾಣಿಗಳ ಧ್ವನಿಯನ್ನು ಅನುಕರಿಸುವುದು ಮತ್ತು ಕೇವಲ 2 ನಿಮಿಷ 40 ಸೆಕೆಂಡ್‌ಗಳಲ್ಲಿ 35 ಮೆಟ್ಟಿಲುಗಳನ್ನು ಸಹಾಯವಿಲ್ಲದೆ ಏರುವ ಮೂಲಕ ತನ್ನ ವಯಸ್ಸಿಗೆ ಮೀರಿದ ಪ್ರತಿಭೆಯನ್ನು ಸಾಬೀತುಪಡಿಸಿದ್ದಾಳೆ.

ತಂದೆ ಸುಧಾಕರ ಆಚಾರ್ಯ ಹಾಗೂ ತಾಯಿ ಸುಚೇತಾ ಅವರು ಮಗಳಲ್ಲಿನ ಪ್ರತಿಭೆಯನ್ನು ಬಾಲ್ಯದಲ್ಲಿಯೇ ಗಮನಿಸಿ ಪ್ರೋತ್ಸಾಹ ನೀಡಿದ್ದು, ರಿತನ್ಯ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News