ಕ್ರಿಕೆಟ್ ಬೆಟ್ಟಿಂಗ್: ಇಬ್ಬರ ಬಂಧನ
Update: 2025-09-29 21:46 IST
ಬ್ರಹ್ಮಾವರ, ಸೆ.29: ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಬ್ರಹ್ಮಾವರ ಪೊಲೀಸರು ಕಚ್ಚೂರು ಬಸ್ ನಿಲ್ದಾಣದ ಸಮೀಪ ಸೆ.29ರಂದು ಬೆಳಗಿನ ಜಾವ 1.10ರ ಸುಮಾರಿಗೆ ಬಂಧಿಸಿದ್ದಾರೆ.
ಕಚ್ಚೂರು ಗ್ರಾಮದ ರಾಘವೇಂದ್ರ(36) ಹಾಗೂ ಬಾರಕೂರಿನ ಜಗನ್ನಾಥ(49) ಎಂದು ಗುರುತಿಸಲಾಗಿದೆ. ಇವರಿಗೆ ಕಾರ್ತಿಕ್ ಎಂಬಾತ ಕ್ರಿಕೆಟ್ ಬೆಟ್ಟಿಂಗ್ ನಡೆಸಲು ಮೊಬೈಲ್‌ನಲ್ಲಿ ಆ್ಯಪ್ ಹಾಕಿಕೊಟ್ಟಿಸಿದ್ದು, ಅದರಂತೆ ಇವರು ಜನ ರಿಂದ ಹಣವನ್ನು ಪಡೆದು ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಾಟಕ್ಕೆ ಸಂಬಂಧಿಸಿ ಬೆಟ್ಟಿಂಗ್ ನಡೆಸುತ್ತಿದ್ದರೆನ್ನಲಾಗಿದೆ.
ಈ ಕುರಿತ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ಎರಡು ಮೊಬೈಲ್ ಫೋನ್ ವಶಕ್ಕೆ ಪಡಿಸಿ ಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.