ಯುವಕ ಆತ್ಮಹತ್ಯೆ
Update: 2025-09-29 21:48 IST
ಕೋಟ, ಸೆ.29: ಕೌಟುಂಬಿಕ ಕಾರಣದಿಂದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.28ರಂದು ಸಂಜೆ ವೇಳೆ ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಗಾವಳಿ ಚೆನ್ನಿಜೆಡ್ಡು ಎಂಬಲ್ಲಿರುವ ಸಾಮ್ರಾಟ್ ಇಂಡಸ್ಟ್ರೀಸ್ ಬಳಿ ನಡೆದಿದೆ.
ಮೃತರನ್ನು ಗದಗ ಮೂಲದ ಶಶಿ(33) ಎಂದು ಗುರುತಿಸಲಾಗಿದೆ. ಇವರು ಸಾಮ್ರಾಟ್ ಇಂಡಸ್ಟ್ರೀಸ್‌ನಲ್ಲಿ ಚಾಲಕ ವೃತ್ತಿ ಮಾಡಿಕೊಂಡಿದ್ದು, ಪತ್ನಿ ಜೊತೆ ಪ್ರತಿದಿನ ಜಗಳ ಮಾಡುತ್ತಿದ್ದರು. ಇದರಿಂದ ಖಿನ್ನತೆಗೆ ಒಳಗಾದ ಇವರು, ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.