ಕಾಂತಾರ ಚಿತ್ರದ ಬಾಲಪ್ರತಿಭೆ ಸಮೀಕ್ಷಾ ಹಕ್ಲಾಡಿಗೆ ಸನ್ಮಾನ
Update: 2025-10-03 17:47 IST
ಕುಂದಾಪುರ, ಅ.3: ಕಾಂತಾರ ಚಾಪ್ಟರ್-1 ಚಿತ್ರದಲ್ಲಿ ನಟಿಸಿರುವ ಬಾಲಪ್ರತಿಭೆ ಸಮೀಕ್ಷಾ ಹಕ್ಲಾಡಿಯವರಿಗೆ ಕೋಟೇಶ್ವರದ ಭಾರತ್ ಸಿನೆಮಾಸ್‌ನಲ್ಲಿ ಕಾಂತಾರ ಚಲನಚಿತ್ರ ಅಭಿಮಾನಿಗಳು ಸನ್ಮಾನಿಸಿ ಗೌರವಿಸಿದರು.
ವಕೀಲ ಟಿ.ಮಂಜುನಾಥ್ ಗಿಳಿಯಾರು ಮಾತನಾಡಿ, ಬಹುಮುಖ ಬಾಲಪ್ರತಿಭೆಯಾಗಿರುವ ಸಮೀಕ್ಷಾ ಸರಕಾರಿ ಶಾಲೆಯ ವಿದ್ಯಾರ್ಥಿನಿ. ಸಂಗೀತ, ಭರತನಾಟ್ಯದಲ್ಲೂ ಮಿಂಚಿದ್ದಾರೆ. ಕಾಂತಾರದಲ್ಲಿ ಉತ್ತಮಪಾತ್ರ ನಿರ್ವಹಿಸಿದ್ದಾರೆಂದರು.
ಸನ್ಮಾನ ಸ್ವೀಕರಿಸಿದ ಸಮೀಕ್ಷಾ ಮಾತನಾಡಿದರು. ದಸಂಸ ಮುಖಂಡರಾದ ಶ್ಯಾಮಸುಂದರ್ ತೆಕ್ಕಟ್ಟೆ, ರಾಜು ಕೆ.ಸಿ.ಬೆಟ್ಟಿನಮನೆ, ಕುಮಾರ್ ಕೋಟ, ಸಮೀಕ್ಷಾ ಅವರ ಪೋಷಕರಾದ ಸುರೇಶ್ ಹಕ್ಲಾಡಿ, ಗೀತಾ, ಚಿತ್ರಾಭಿಮಾನಿಗಳು ಉಪಸ್ಥಿತರಿದ್ದರು.