×
Ad

ಮಲ್ಪೆ ಬೀಚ್‌ನಲ್ಲಿ ಓರ್ವ ಯುವಕ ಸಮುದ್ರ ಪಾಲು: ಮತ್ತೊರ್ವ ಅಸ್ವಸ್ಥ

Update: 2025-10-03 21:31 IST

ಮಲ್ಪೆ, ಅ.3: ಮಲ್ಪೆ ಬೀಚ್‌ನ ನೀರಿನಲ್ಲಿ ಆಡುತ್ತಿದ್ದ ಯುವಕರ ತಂಡದಲ್ಲಿನ ಓರ್ವ ಸಮುದ್ರ ಪಾಲಾಗಿದ್ದು, ಇನ್ನೋರ್ವ ಗಂಭೀರ ಅಸ್ವಸ್ಥಗೊಂಡ ಘಟನೆ ಇಂದು ಸಂಜೆ ವೇಳೆ ನಡೆದಿದೆ.

ನಾಪತ್ತೆಯಾದವರನ್ನು ಹಾಸನದ ಮಿಥುನ್(20) ಎಂದು ಗುರುತಿಸ ಲಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡ ಶಶಾಂಕ್(22) ಎಂಬವರು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಟ್ಟು ಏಳು ಮಂದಿ ಯುವಕರ ತಂಡ ಹಾಸನದಿಂದ ಪ್ರವಾಸ ಬಂದಿದ್ದು, ಸಂಜೆ ಮಲ್ಪೆ ಬೀಚಿನ ಸಮುದ್ರದಲ್ಲಿ ಆಡುತ್ತಿದ್ದರು. ಈ ವೇಳೆ ಯುವಕರು ಸಮುದ್ರದ ಅಲೆಗೆ ಸಿಲುಕಿ ಕೊಚ್ಚಿಕೊಂಡು ಹೋದರು. ಕೂಡಲೇ ಲೈಫ್ ಗಾರ್ಡ್‌ಗಳು ಹಾಗೂ ಸ್ಥಳೀಯರು ಆರು ಮಂದಿ ರಕ್ಷಿಸಿದರು. ಇದರಲ್ಲಿ ಶಶಾಂಕ್ ಹೊರತು ಪಡಿಸಿ ಉಳಿದವರು ಅಪಾಯದಿಂದ ಪಾರಾಗಿದ್ದಾರೆ. ನಾಪತ್ತೆಯಾದ ಮಿಥುನ್‌ಗಾಗಿ ಹುಡುಕಾಟ ಮುಂದುವರೆದಿದೆ. ಸ್ಥಳಕ್ಕೆ ಮಲ್ಪೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News