×
Ad

ಸಾಗರ ನೌಕಾಯಾನ ಸಾಹಸಯಾತ್ರೆ ಶಿಬಿರಾರ್ಥಿಗಳಿಂದ ಸ್ವಚ್ಛತೆ

Update: 2025-10-04 22:28 IST

ಉಡುಪಿ, ಅ.4: ಉಡುಪಿಯಲ್ಲಿ ಪ್ರತಿಷ್ಠಿತ ಸಾಗರ ನೌಕಾಯಾನ ಸಾಹಸ ಯಾತ್ರೆ ಶಿಬಿರದ ತರಬೇತಿ ಚಟುವಟಿಕೆ ಗಳಲ್ಲಿ ಪಾಲ್ಗೊಂಡಿರುವ ಕರ್ನಾಟಕ ಮತ್ತು ಗೋವಾದ ನೌಕಾಪಡೆಯ ಎನ್‌ಸಿಸಿ ಕೆಡೆಟ್‌ಗಳು ಮಲ್ಪೆ ಸಮುದ್ರ ಕಿನಾರೆ ಹಾಗೂ ಇತರ ಕಡೆಗಳಲ್ಲಿ ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಂಡರು.

ಸಾಗರ ನೌಕಾಯಾನ ದಂಡಯಾತ್ರೆ ಶಿಬಿರದ ಎರಡನೇ ದಿನದಂದು (ಮೆನು - 2025), ಕರ್ನಾಟಕ ಮತ್ತು ಗೋವಾದ 72 ಎನ್‌ಸಿಸಿ ಕೆಡೆಟ್‌ಗಳು ಉಡುಪಿಯ ಶಾರದಾ ವಸತಿ ಶಾಲೆಯ ಕ್ಯಾಂಪ್ ಸೈಟ್ ಮತ್ತು ಮಲ್ಪೆ ಬೀಚಿನಲ್ಲಿ ಶ್ರಮದಾನ ಚಟುವಟಿಕೆಗಳು ಮತ್ತು ಬೀಚ್ ಸ್ವಚ್ಛಗೊಳಿಸುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಸ್ವಚ್ಛತೆಯನ್ನು ಉತ್ತೇಜಿಸುವುದು, ಸಮುದಾಯದ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವುದು ಮತ್ತು ಸುತ್ತಮುತ್ತ ಲಿನ ಪ್ರದೇಶಗಳಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಇವರಿಗೆ ನೀಡಲಾ ಗಿತ್ತು. ಅದಕ್ಕೆ ಅನುಗುಣವಾಗಿ ಮಲ್ಪೆ ಮತ್ತು ಉಡುಪಿ ಪ್ರದೇಶದ ಸಾರ್ವಜನಿಕರಿಗೆ ಸಂದೇಶವನ್ನು ಹರಡಲು ರೂಟ್ ಮಾರ್ಚ್‌ನ್ನು ಸಹ ನಡೆಸಲಾಯಿತು.

ಸ್ವಚ್ಛತೆ ಪ್ರತಿಯೊಬ್ಬರ ಕರ್ತವ್ಯ ಎಂಬ ಸಂದೇಶದೊಂದಿಗೆ, ಸಣ್ಣ ಸ್ವಯಂ ಪ್ರೇರಿತ ಕೊಡುಗೆಗಳು ದೊಡ್ಡ ಪ್ರಮಾ ಣದ ಸಾಮಾಜಿಕ ಬದಲಾವಣೆಗೆ ಹೇಗೆ ಕಾರಣವಾಗಬಹುದು ಎಂಬುದನ್ನು ಕೆಡೆಟ್‌ಗಳು ತೋರಿಸಿದರು. ಇದರೊಂದಿಗೆ ಕೆಡೆಟ್‌ಗಳು ಎನ್‌ಸಿಸಿಯ ಏಕತೆ ಮತ್ತು ಶಿಸ್ತನ್ನು ಎತ್ತಿ ಹಿಡಿದರ ಲ್ಲದೇ, ಎನ್‌ಸಿಸಿಯ ಸಮುದಾಯ ಸೇವಾ ನೀತಿಯನ್ನು ಬಲಪಡಿಸಿದರು.

ಶಿಬಿರದ ಚಟುವಟಿಕೆಗಳ ಭಾಗವಾಗಿ, ಕೆಡೆಟ್‌ಗಳು ಉದ್ಯಾವರದಲ್ಲಿ ಎನ್‌ಸಿಸಿ ಬೋಟ್ ಪೂಲ್‌ನಲ್ಲಿ ಸೈಲ್ ಬೋಟ್ ನಿರ್ವಹಣೆ ಮತ್ತು ರಿಗ್ಗಿಂಗ್ ಕುರಿತು ತರಬೇತಿ ಪಡೆದರು. 15 ದಿನಗಳ ಕಾಲ ನಡೆಯುವ ಮೆನು ಶಿಬಿರವು ಕೆಡೆಟ್‌ ಳಲ್ಲಿ ಕಮಾಂಡಿಂಗ್, ಸಹಕಾರ, ತಂಡದ ಕೆಲಸ, ಶಿಸ್ತು ಸೇರಿದಂತೆ ನಾಯಕತ್ವದ ಅಂಶಗಳನ್ನು ಬೆಳೆಸಲು ವಿಶೇಷ ಒತ್ತು ನೀಡುತ್ತದೆ. ಇದರೊಂದಿಗೆ ಕೆಡೆಟ್‌ಗಳ ಅತ್ಯುತ್ತಮ ಪ್ರತಿಭೆಯನ್ನು ಹೊರತರುವ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳೂ ನಡೆದವು.

ಕರ್ನಾಟಕ ಮತ್ತು ಗೋವಾ ಎನ್‌ಸಿಸಿ ನಿರ್ದೇಶನಾಲಯದ ಸಮಗ್ರ ಮಾರ್ಗದರ್ಶನದಲ್ಲಿ ಉಡುಪಿಯ ಎನ್‌ಸಿಸಿಯ ನಂಬರ್ 6 ಕರ್ನಾಟಕ ನೌಕಾ ಘಟಕದಿಂದ ಆಯೋಜಿಸಲ್ಪಟ್ಟ ಈ ಶಿಬಿರ ಕರ್ನಲ್ ವಿರಾಜ್ ಕಾಮತ್ ನೇತೃತ್ವದ ಗ್ರೂಪ್ ಹೆಡ್ ಕ್ವಾರ್ಟರ್ಸ್ ಮಂಗಳೂರಿನ ಆಶ್ರಯದಲ್ಲಿ ನಡೆಯುತ್ತಿದೆ. ಉಡುಪಿಯ 6 ಕೆಎಆರ್‌ನ್ನು ಎನ್‌ಸಿಸಿಯ ಕಮಾಂಡಿಂಗ್ ಆಫೀಸರ್ ಕಮಾಂಡರ್ ಅಶ್ವಿನ್ ಎಂ ರಾವ್ ಮುನ್ನಡೆಸುತಿದ್ದಾರೆ. 



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News