ಮನೆಯಲ್ಲಿದ್ದ ಚಿನ್ನಾಭರಣ ಕಳವು: ಪ್ರಕರಣ ದಾಖಲು
Update: 2025-10-04 22:33 IST
ಕೋಟ, ಅ.4: ಮನೆಯ ಕಾಪಾಟಿನಲ್ಲಿದ್ದ ಲಕ್ಷಾಂತರ ರೂ ಮೌಲ್ಯದ ಚಿನ್ನದ ಸರ ಕಳವಾಗಿರುವ ಘಟನೆ ಯಡಾಡಿ ಮತ್ಯಾಡಿ ಗ್ರಾಮದ ನಾಲ್ತೂರು ಎಂಬಲ್ಲಿ ನಡೆದಿದೆ.
ಬಸವ ಪೂಜಾರಿ ಎಂಬವರ ಮನೆಗೆ ಸೆ.26ರಂದು ಸಂಜೆ ಶಿರಿಯಾರ ನಿವಾಸಿ ಆನಂದ ಎಂಬವರು ಬಂದು ಕೆಲಸದ ಬಗ್ಗೆ ಮಾತನಾಡಿಕೊಂಡು ರಾತ್ರಿ ಹೊಗಿದ್ದರು. ಬಸವ ಪೂಜಾರಿ ಸೆ.27ರಂದು ಬೆಳಗ್ಗೆ ನೋಡಿದಾಗ ಗೋದ್ರೇಜ್ ನಲ್ಲಿಟ್ಟಿದ್ದ 18 ಗ್ರಾಂ ತೂಕದ 1.45ಲಕ್ಷ ರೂ. ಮೌಲ್ಯದ ಚಿನ್ನದ ಸರ ಕಳವಾಗಿರುವುದು ಕಂಡುಬಂದಿದೆ. ಇದನ್ನು ಆನಂದ ಅಥವಾ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರಬೇಕೆಂದು ಬಸವ ಪೂಜಾರಿ ದೂರಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.