ಮಲ್ಪೆ ಬೀಚ್‌ನಲ್ಲಿ ನುರಿತ ಲೈಫ್‌ಗಾರ್ಡ್ ನೇಮಿಸಲು ಆಗ್ರಹ
Update: 2025-10-05 18:15 IST
ಉಡುಪಿ, ಅ.5: ಮಲ್ಪೆ ಹಾಗೂ ಉಡುಪಿ ಜಿಲ್ಲೆಯ ಎಲ್ಲಾ ಪ್ರಮುಖ ಬೀಚ್‌ಗಳಲ್ಲಿ ಹೆಚ್ಚಿನ ಸಂಖ್ಯೆಯ ಸ್ಥಳೀಯ ನುರಿತ ಲೈಫ್‌ಗಾರ್ಡ್‌ಗಳನ್ನು ಅತೀ ಶೀಘ್ರದಲ್ಲೇ ನೇಮಿಸಬೇಕು ಎಂದು ಮೀನುಗಾರ ಮುಖಂಡ ವಿಶ್ವಾಸ್ ಅಮೀನ್ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಮಲ್ಪೆ ಬೀಚ್‌ನಲ್ಲಿ ಇತ್ತೀಚೆಗೆ ಪ್ರವಾಸಿಗರು ಸಮುದ್ರದಲ್ಲಿ ಈಜಲು ಹೋಗಿ ಜೀವ ಕಳೆದುಕೊಂಡಿದ್ದಾರೆ. ಇದಕ್ಕೆ ಜಿಲ್ಲಾಡಳಿತದ ನಿರ್ಲಕ್ಷ್ಯ ಕಾರಣ ಎಂಬ ಮಾತು ಕೇಳಿಬರುತ್ತಿದೆ. ಬೀಚ್‌ನಲ್ಲಿ ಈಜಲು ಬಾರದ ಲೈಫ್ ಗಾರ್ಡ್‌ಗಳು ನಿಯೋಜಿಸಿರುವುದರಿಂದ ಸಹಸ್ರಾರು ಸಂಖ್ಯೆಯ ಪ್ರವಾಸಿಗ ರನ್ನು ನಿಯಂತ್ರಿಸಲು ಅಥವಾ ಯಾವುದೇ ಅವಘಡ ಸಂಭವಿಸಿದಾಗ ರಕ್ಷಿಸಲು ಸಾಧ್ಯವಾಗುತ್ತಿಲ್ಲ. ತಕ್ಷಣ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮಲ್ಪೆ ಬೀಚ್‌ನಲ್ಲಿ ಈಜು ಬಾರದ ಲೈಫ್‌ಗಾರ್ಡ್‌ಗಳನ್ನು ನೇಮಿಸಿರುವುದರ ಬಗ್ಗೆ ಸೂಕ್ತ ತನಿಖೆ ಮಾಡಬೇಕೆಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.