×
Ad

ಗೋಪಾಲ ಭಂಡಾರಿ ಸೇವಾ ಟ್ರಸ್ಟ್ ಅಧ್ಯಕ್ಷರಾಗಿ ನೀರೆ ಕೃಷ್ಣ ಶೆಟ್ಟಿ

Update: 2025-10-06 19:51 IST

ಹೆಬ್ರಿ, ಅ.6: ಕಾರ್ಕಳ ಶಾಸಕರಾಗಿ ಜನನಾಯಕರೆನಿಸಿಕೊಂಡಿದ್ದ ದಿ. ಹೆಬ್ರಿ ಗೋಪಾಲ ಭಂಡಾರಿ ಅವರ ಹೆಸರಿನಲ್ಲಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್‌ನ್ನು ಹೆಬ್ರಿಯಲ್ಲಿ ರಚಿಸಲಾಗಿದೆ.

ಹೆಬ್ರಿ ಗೋಪಾಲ ಭಂಡಾರಿ ಸೇವಾ ಟ್ರಸ್ಟ್ ಅಧ್ಯಕ್ಷರಾಗಿ ನೀರೆ ಕೃಷ್ಣ ಶೆಟ್ಟಿ ಅವರನ್ನು ಚೈತನ್ಯ ಯುವ ವೃಂದದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಕಾರ್ಯದರ್ಶಿ ದೀಪಾ ಭಂಡಾರಿ ಚಾರ, ಕೋಶಾಧಿ ಕಾರಿ ಎಚ್. ಜನಾರ್ಧನ್ ಹೆಬ್ರಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರಾಜೇಶ ಭಂಡಾರಿ ಹುತ್ತುರ್ಕೆ ಚಾರ, ವಾದಿರಾಜ ಶೆಟ್ಟಿ ಚಾರ, ನವೀನ್ ಕೆ ಅಡ್ಯಂತಾಯ, ಪತ್ರಕರ್ತ ಸುಕುಮಾರ್ ಮುನಿಯಾಲ್, ಗೋಪಿನಾಥ ಭಟ್ ಮುನಿಯಾಲು, ಮೋಹನದಾಸ ನಾಯಕ್ ಶಿವಪುರ, ಜಗದೀಶ ಹೆಗ್ಡೆ ಕಡ್ತಲ, ಜಗನ್ನಾಥ ಕುಲಾಲ್ ಶಿವಪುರ, ಬೈಕಾಡಿ ಮಂಜುನಾಥ ರಾವ್ ಶಿವಪುರ, ಪ್ರಕಾಶ ಪೂಜಾರಿ ಮಾತಿಬೆಟ್ಟು, ಜಾನ್ ಟೆಲ್ಲಿಸ್ ಅಜೆಕಾರು, ರಾಘವೇಂದ್ರ ನಾಯ್ಕ್‌ರನ್ನು ನೇಮಕ ಮಾಡಲಾಗಿದೆ.

ಹೆಬ್ರಿ ಗೋಪಾಲ ಭಂಡಾರಿ ಸೇವಾ ಟ್ರಸ್ಟ್ ಪ್ರಥಮ ಸಭೆಯು ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಗೋಪಾಲ ಭಂಡಾರಿ ಮನೆಯಲ್ಲಿ ನಡೆಯಿತು. ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಗೋಪಾಲ ಭಂಡಾರಿ ಅವರ ಪತ್ನಿ ಪ್ರಕಾಶಿನಿ ಭಂಡಾರಿ, ರಾಜೇಶ ಭಂಡಾರಿ, ಶ್ವೇತ ಕುಮಾರ್ ಮುಂತಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News