ಯುವಕ ಆತ್ಮಹತ್ಯೆ
Update: 2025-10-06 21:33 IST
ಹಿರಿಯಡ್ಕ, ಅ.5: ಸೇತುವೆಯಿಂದ ನದಿಗೆ ಹಾರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರಿಯಡ್ಕ ಮಾಣೈ ಎಂಬಲ್ಲಿ ನಡೆದಿದೆ.
ಮೃತರನ್ನು ಮಣಿಪಾಲದ ಎಂಪಿಐ ಕಂಪೆನಿಯ ಉದ್ಯೋಗಿ, ಭಟ್ಕಳ ಕುಂಟುವಾಣಿ ಗ್ರಾಮದ ಜಯಂತ ನಾಗೇಶ್ ದೇಶ್ ಭಂಡಾರಿ(34) ಎಂದು ಗುರುತಿಸಲಾಗಿದೆ.
ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಇವರು, ಅ.4ರಂದು ಸಂಜೆಯಿಂದ ಅ.6ರ ಬೆಳಗ್ಗಿನ ಮಧ್ಯಾವಧಿಯಲ್ಲಿ ಹಿರಿಯಡ್ಕ ಮಾಣೈ ಸೇತುವೆಯ ಬಳಿಯ ಸುವರ್ಣ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.