×
Ad

ಅಕ್ಕ ಸಂಜೀವಿನಿ ದೀಪಾವಳಿ ಗಿಫ್ಟ್ ಬಾಕ್ಸ್ ಬಿಡುಗಡೆ

Update: 2025-10-15 19:35 IST

ಉಡುಪಿ, ಅ.15: ಉಡುಪಿ ಜಿಲ್ಲಾ ಪಂಚಾಯತ್ ಹಾಗೂ ಕಾಪು ತಾಲೂಕು ಪಂಚಾಯತ್ ವತಿಯಿಂದ ನಾಲ್ಕು ಅಕ್ಕ ಸಂಜೀವಿನಿ ಅಂಗಡಿ ಮೂಲಕ ತಯಾರಿಸಿದ ದೀಪಾವಳಿ ಗಿಫ್ಟ್ ಬಾಕ್ಸ್‌ಗಳನ್ನು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಸಹಾಯಕ ಆಯುಕ್ತೆ ರಶ್ಮಿ, ಪೊಲೀಸ್ ವರಿಷ್ಠ್ಠಾಧಿಕಾರಿ ಹರಿರಾಮ್ ಶಂಕರ್, ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ್, ಯೋಜನಾ ನಿರ್ದೇಶಕ ವಿಜಯ್ ಕುಮಾರ್ , ಕಾಪು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಜೇಮ್ಸ್ ಡಿಸಿಲ್ವಾ ಹಾಗೂ ಸಂಜೀವಿನಿ ಯೋಜನೆಯ ಜಿಲ್ಲಾ ಮತ್ತು ತಾಲೂಕು ಅಭಿಯಾನ ನಿರ್ವಹಣಾ ಘಟಕದ ಸಿಬ್ಬಂದಿ ಉಪಸ್ಥಿತರಿದ್ದರು.

ಕಟಪಾಡಿ ಅಕ್ಕ ಸಂಜೀವಿನಿ ಅಂಗಡಿಯ ಡ್ರೈ ಫ್ರೂಟ್ಸ್ ಗಿಫ್ಟ್ ಬಾಕ್ಸ್, ಪಡುಬಿದ್ರೆ ಹಾಗೂ ಶಿರ್ವ ಅಕ್ಕ ಅಂಗಡಿಯ ಮನೆಯಲ್ಲಿ ತಯಾರಿಸಿದ ವಿವಿಧ ಬಗೆಯ ಲಡ್ಡು, ಸ್ವೀಟ್ಸ್, ಸಿಹಿ ತಿನಿಸುಗಳು ಹಾಗೂ ಬೆಳಪು ಅಕ್ಕ ಅಂಗಡಿಯ ಗೋಉತ್ಪನ್ನಗಳಿಂದ ತಯಾರಿಸಿದ ಪೂಜಾ ಸಾಮಗ್ರಿಗಳನ್ನು ದೀಪಾವಳಿಯ ಉಡುಗೊರೆಯಾಗಿ ನೀಡಲು ಬಾಕ್ಸ್ ರೂಪದಲ್ಲಿ ವಿನ್ಯಾಸಗೊಳಿಸಲಾಗಿದೆ.

ಸಂಜೀವಿನಿ ದೀಪಾವಳಿ ಉಡುಗೊರೆ ಬೇಕಾದಲ್ಲಿ ಲಕ್ಷ್ಮಿ ಇವರ ದೂ.ಸಂ: 8147852990 ಅನ್ನು ಸಂಪರ್ಕಿಸ ಬಹುದು ಎಂದು ಸಂಜೀವಿನಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News