×
Ad

ಉಡುಪಿ: ಮಹಿಳಾ ಪೊಲೀಸ್ ಸಮಾವೇಶ ಉದ್ಘಾಟನೆ

Update: 2025-10-16 18:33 IST

ಉಡುಪಿ, ಅ.16: ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಉಡುಪಿ ಬಡಗಬೆಟ್ಟು ಸೊಸೈಟಿಯ ಜಗನ್ನಾಥ ಸಭಾ ಭವನದಲ್ಲಿ ಆಯೋಜಿಸಲಾದ ಎರಡು ದಿನಗಳ ಮಹಿಳಾ ಪೊಲೀಸ್ ಸಮಾವೇಶವನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಗುರುವಾರ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಮಣಿಪಾಲ ಕೆಎಂಸಿಯ ಅಸೋಸಿಯೇಟ್ ಪ್ರೊಫೆಸರ್ ಡಾ.ಸುಜಾತ ಬಿ.ಎಸ್. ಮಾತನಾಡಿ ದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್.ನಾಯ್ಕ್, ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಡಾ.ಹರ್ಷ ಪ್ರಿಯಂವದ ಉಪಸ್ಥಿತರಿದ್ದರು.

ಮೊದಲ ದಿನದ ಅಂಗವಾಗಿ ಮೊದಲಿಗೆ ಡಾ.ಸುಜಾತ ಬಿ.ಎಸ್., ಮಹಿಳಾ ಸಿಬ್ಬಂಧಿಗಳಿಗೆ ಮಹಿಳಾ ಅರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ನಂತರದಲ್ಲಿ ಡಾ.ಹರ್ಷ ಪ್ರಿಯಂವದ ಆನ್‌ಲೈನ್ ಸೈಬರ್ ಅಪರಾಧಗಳ ಬಗ್ಗೆ ಪೋರ್ಟಲ್ ಬಗ್ಗೆ ತರಬೇತಿ ನೀಡಿದರು. ಪರೀಕ ಎಸ್‌ಡಿಎಂನ ಮುಖ್ಯ ವೈದ್ಯಾಧಿಕಾರಿ ಡಾ.ಗೋಪಾಲ ಪೂಜಾರಿ, ಯೋಗ ಮತ್ತು ಧ್ಯಾನದ ಬಗ್ಗೆ ಮಾಹಿತಿ ನೀಡಿದರು.

ಬಳಿಕ ಮಹಿಳಾ ಸಿಬ್ಬಂದಿಗಳಿಗೆ ಉಡುಪಿ ಕಲ್ಪನಾ ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಣೆ ವ್ಯವಸ್ಥೆಯನ್ನು ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News