ಐಎಂಎ ಉಡುಪಿ ಕರಾವಳಿ ಶಾಖೆಯ ಪದಗ್ರಹಣ
ಉಡುಪಿ, ಅ.17: ಐಎಂಎ ಉಡುಪಿ ಕರಾವಳಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉಡುಪಿಯ ಅಮೃತ ಗಾರ್ಡನ್‌ನಲ್ಲಿ ನಡೆಯಿತು.
ಬ್ರಿಗೇಡಿಯರ್ ಡಾ.ಅರೆಬೆಟ್ಟು ಪ್ರಭಾಕರ್ ಕಾಮತ್ ನೂತನ ಅಧ್ಯಕ್ಷ ಡಾ.ಅಶೋಕ್ ಕುಮಾರ್ ನೇತೃತ್ವದ ತಂಡದ ಪದಗ್ರಹಣ ನೆರವೇರಿಸಿದರು. ಅತಿಥಿಯಾಗಿ ಕುಂದಾಪುರದ ಚಿನ್ಮಯಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಉಮೇಶ್ ಪುತ್ರನ್, ಮಹಿಳಾ ವಿಭಾಗದ ಡಾ.ಅಧ್ಯಕ್ಷೆ. ಡಾ.ವಿಜಯ ವೈ.ಬಿ., ಕಾರ್ಯದರ್ಶಿ ಡಾ.ರಂಜಿತಾ ನಾಯಕ್, ಕೋಶಾಧಿಕಾರಿ ಡಾ.ವೀಣಾ ನರೇಂದ್ರ ಉಪಸ್ಥಿತರಿದ್ದರು.
ನಿರ್ಗಮನ ಅಧ್ಯಕ್ಷ ಡಾ. ಸುರೇಶ್ ಶೆಣೈ ಸ್ವಾಗತಿಸಿದರು. ಕಾರ್ಯದರ್ಶಿ ಡಾ.ವಿಜಯಲಕ್ಷ್ಮೀ ಗತ ಸಾಲಿನ ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ಡಾ.ಶರತ್‌ಚಂದ್ರ ರಾವ್ ವರದಿ ವಾಚಿಸಿದರು. ಡಾ.ಆಮ್ನ ಹಾಗು ಡಾ.ಮಮತ ನಿರೂಪಿಸಿದರು. ನೂತನ ಕಾರ್ಯದರ್ಶಿ ಮಾನಸ ಈ.ಆರ್. ವಂದಿಸಿದರು.
ನೂತನ ಕಾರ್ಯಕಾರಿ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಡಾ. ಅಂಜಲಿ ಮುಂಡ್ಕೂರು, ಡಾ.ಸಂಜಯ ಉಡುಪ, ಡಾ.ಸುದೀಪ್ ಶೆಟ್ಟಿ, ಡಾ.ವಿಜಯ್ ಕುಮಾರ್ ಶೆಟ್ಟಿ, ಡಾ.ಗಣಪತಿ ಹೆಗ್ಡೆ, ಡಾ.ಅರುಣ ವರ್ಣೇಕರ್, ಡಾ. ವಿನುಥಾ, ಡಾ.ಅರ್ಚನಾ ಭಕ್ತ, ಡಾ.ದೀಪಕ್ ಮಾಲ್ಯ, ಡಾ.ಸಂದೀಪ್ ಕುಮಾರ್, ಡಾ.ಹರೀಶ್ ನಾಯಕ್, ಡಾ.ಅನಂತ ಶೆಣೈ, ಡಾ.ಸತೀಶ್ ಕೆ.ನಾಯಕ್, ರಾಜ್ಯ ಸಮಿತಿ ಸದಸ್ಯರಾಗಿ ಡಾ.ವಾಸುದೇವ, ಡಾ.ವೈ.ಎಸ್. ರಾವ್, ಡಾ.ತಿಲಕಚಂದ್ರ ಪಾಲ್, ಡಾ.ಮೂರಳಿಧರ ಪಾಟೀಲ, ಡಾ.ಗೀತಾ ಪುತ್ರನ್, ಡಾ.ರಾಜಲಕ್ಷ್ಮಿ ಮತ್ತು ಕೇಂದ್ರ ಸಮಿತಿ ಸದಸ್ಯರುಗಳಾಗಿ ಡಾ.ಸುದೇಶ್ ಕುಮಾರ್ ಯು., ಡಾ.ರಾಜಗೋಪಾಲ ಭಾಂಡಾರಿ, ಡಾ.ಸತೀಶ್ ಕಾಮತ್, ಪರ್ಯಾಯ ಕೇಂದ್ರ ಸಮಿತಿ ಸದಸ್ಯರು ಡಾ.ಸುನೀಲ್ ಮುಂಡ್ಕೂರು, ಡಾ.ಉಮೇಶ್ ನಾಯಕ್, ಡಾ. ವಿಜಯ್ ಕುಮಾರ್ ಶೆಟ್, ಉಪಾಧ್ಯಕ್ಷರಾಗಿ ಡಾ.ವಿಜಯಾ ವೈ.ಬಿ., ಸಹ ಕಾರ್ಯದರ್ಶಿಯಾಗಿ ಡಾ.ಸುಶಾನ್ ಎಸ್.ಶೆಟ್ಟಿ, ಖಜಾಂಚಿಯಾಗಿ ಡಾ. ಸನತ್ ರಾವ್, ಸಹ ಖಜಾಂಚಿಯಾಗಿ ಡಾ.ಕಿರಣ್ ಆಯ್ಕೆಯಾಗಿದ್ದಾರೆ.