×
Ad

ಸರಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆ ನಿಷೇಧ ಸಂಪುಟ ನಿರ್ಧಾರ ಸ್ವಾಗತಾರ್ಹ: ಸುಂದರ ಮಾಸ್ತರ್

Update: 2025-10-17 18:59 IST

ಉಡುಪಿ, ಅ.18: ಮುಗ್ಧ ಎಳೆಯ ಮಕ್ಕಳ ಮನಸ್ಸಿನಲ್ಲಿ ವರ್ಣ ವ್ಯವಸ್ಥೆಯೇ, ಜಾತೀಯತೆಯೇ, ಅಸಮಾನತೆಯೇ ಮೂಲ ಮಂತ್ರ ವಾಗಿರುವ ಸನಾನತನ ಧರ್ಮದ ವಿಷ ಬೀಜವನ್ನು ಬಿತ್ತುವ ಕೆಲಸ ಮಾಡುತ್ತಿರುವ ಆರ್‌ಎಸ್‌ಎಸ್‌ನ್ನು ಸರಕಾರಿ ಸ್ಥಳಗಳಲ್ಲಿ ನಿಷೇಧಿಸಿರುವ ಕರ್ನಾಟಕ ಸರಕಾರದ ದಿಟ್ಟ ಕ್ರಮಕ್ಕೆ ಅಬಿನಂಧನೆಗಳು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್ ತಿಳಿಸಿದ್ದಾರೆ.

ನೊಂದಾವಣಿಯೇ ಆಗದಂತ ಸಂಘ ಇಡೀ ದೇಶದಲ್ಲಿ ಗುಂಪು ಕಟ್ಟಿಕೊಂಡು ರಾಜಾರೋಷವಾಗಿ ಲಾಠಿ ಹಿಡಿದು ರಸ್ತೆ ರಸ್ತೆಗಳಲ್ಲಿ ಪಥಸಂಚಲನ ನಡೆಸಿ ಸಾರ್ವಜನಿಕರಲ್ಲಿ ಭಯೋತ್ಪಾದನೆ ಸೃಷ್ಠಿ ಮಾಡುತ್ತಿದೆ. ತಮ್ಮ ಸನಾತನ ಧರ್ಮ ವನ್ನು ಒಪ್ಪಿಕೊಳ್ಳದ, ಟೀಕಿಸುವವರನ್ನು ಕೊಲ್ಲುವ ಮಟ್ಟದ ಮನಸ್ಥಿತಿಯನ್ನು ಈ ಆರ್‌ಎಸ್‌ಎಸ್ ಸಂಘಗಳು ಬೆಳೆಸುತ್ತದೆ. ಈಗ ಪ್ರಿಯಾಂಕ ಖರ್ಗೆಯವರಿಗೂ ಎಡೆಬಿಡದೆ ಬೆದರಿಕೆ ಕರೆಗಳು ಬರುತ್ತಿವೆ. ಇದು ಖಂಡನೀಯ ಎಂದು ಅವರು ಹೇಳಿದ್ದಾರೆ.

ನಾವು ಈ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗೆ ನಾವು ಬಧ್ದರಾಗಿದ್ದೇವೆ. ನಮ್ಮ ತಾಳ್ಮೆ ಮತ್ತು ಸಹನೆಯನ್ನು ಕೆಣಕಬೇಡಿ. ಪ್ರಾಥಮಿಕ ಶಾಲೆಗೆ ಹೋಗುವ ನಿಶ್ಕಲ್ಮಶ ಮುಗ್ಧ ಮಕ್ಕಳ ಮನಸ್ಸಿನಲ್ಲಿ ಈ ರೀತಿಯ ಧ್ವೇಷ ಭಾವನೆಯನ್ನು ಪ್ರತಿಷ್ಠಾಪಿಸುವ ಕೆಲಸವನ್ನು ಈ ಆರೆಸ್ಸೆಸ್ ಮಾಡುತ್ತಿದೆ. ಈ ಧರ್ಮಾಧಾರಿತ ಸಂಘಟನೆ ಗಳಿಂದ ಬುಧ್ಧ ಹುಟ್ಟಿದ ನಾಡು, ಗಾಂಧಿಜೀ ಹುಟ್ಟಿದ ನಾಡಿನಲ್ಲಿ ಸಹನೆ, ಶಾಂತಿ, ಸಹಭಾಳ್ವೆ ಮಾಯವಾಗಿ ದೇಶಾಧ್ಯಂತ ಒಂದು ರೀತಿಯ ಆತಂಕ, ಅಸಹಿಷ್ಣುತೆ, ಧ್ವೇಷ ಭಾವನೆ ವ್ಯಾಪಕವಾಗಿದೆ.

ಈ ಎಲ್ಲಾ ಕೆಡುಕುಗಳಿಂದ ಮುಕ್ತವಾಗಲು ಸನಾತನ ಧರ್ಮದ ಅಫೀಮನ್ನು ತುಂಬುವ ಆರ್‌ಎಸ್‌ಎಸ್‌ನ ಚಟುವಟಿಕೆ ಗಳನ್ನು ಸರಕಾರಿ, ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸಿರುವುದು ನಿಜಕ್ಕೂ ಸ್ವಾಗತಾರ್ಹ ಎಂದು ಸುಂದರ ಮಾಸ್ತರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News