×
Ad

ಕೋಳಿ ಅಂಕಕ್ಕೆ ದಾಳಿ: ಇಬ್ಬರ ಬಂಧನ

Update: 2025-10-17 21:29 IST

ಬ್ರಹ್ಮಾವರ, ಅ.17: ಹೇರಾಡಿ ಗ್ರಾಮದ ಕೂಡ್ಲಿ ಎಂಬಲ್ಲಿನ ಸರಕಾರಿ ಜಾಗದಲ್ಲಿ ಅ.16ರಂದು ಸಂಜೆ ವೇಳೆ ಹಣವನ್ನು ಪಣವಾಗಿ ಕೋಳಿ ಅಂಕ ನಡೆಸುತ್ತಿದ್ದ ಮಂದಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.

ಪ್ರಶಾಂತ್ ಹಾಗೂ ರಾಘವೇಂದ್ರ ಬಂಧಿತ ಆರೋಪಿಗಳು. ಇವರಿಂದ 2120ರೂ. ನಗದು ಹಾಗೂ 2 ಕೋಳಿಗಳು, ಕೋಳಿಗಳ ಕಾಲಿಗೆ ಕಟ್ಟಿದ 2 ಕೋಳಿ ಬಾಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ದಾಳಿ ವೇಳೆ ಲೋಕೇಶ್, ವಿಜೇತ, ಅಭಿ, ಅರುಣ್ ಶೆಟ್ಟಿ, ಹಾಗೂ ಇತರರು ಓಡಿಹೋಗಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News