ಲಕ್ಷಾಂತರ ರೂ. ಆನ್‌ಲೈನ್ ವಂಚನೆ: ಪ್ರಕರಣ ದಾಖಲು
Update: 2025-10-17 21:30 IST
ಕೋಟ, ಅ.17: ಹಣ ಹೂಡಿಕೆ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ಆನ್‌ಲೈನ್ ವಂಚಿಸಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜಾರಾಮ್(36) ಎಂಬವರಿಗೆ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವ ವಿಚಾರವಾಗಿ ಸಂದೇಶ ಬಂದಿದ್ದು, ಅದನ್ನು ನಂಬಿದ ರಾಜಾರಾಮ್, ಮಾ.14ರಿಂದ ಮೇ 14ರ ಮಧ್ಯಾವಧಿಯಲ್ಲಿ ಬೇರೆ ಬೇರೆ ಹಂತಗಳಲ್ಲಿ ಒಟ್ಟು 7,51,850ರೂ. ಹಣವನ್ನು ಅಪರಿಚಿತರ ಖಾತೆಗೆ ಆನ್‌ಲೈನ್‌ನಲ್ಲಿ ವರ್ಗಾಯಿಸಿದ್ದರು. ಆದರೆ ಬಳಿಕ ಅಪರಿಚಿತರು ಹಣ ನೀಡದೆ ಮೋಸ ಮಾಡಿರುವುದಾಗಿ ದೂರಲಾಗಿದೆ.