×
Ad

ಗರ್ಭಿಣಿ ಮಹಿಳೆ ಮೃತ್ಯು

Update: 2025-10-17 21:31 IST

ಮಣಿಪಾಲ, ಅ.17: ಹೊಟ್ಟೆಯಲ್ಲಿ ಮೃತಪಟ್ಟ ಮಗುವನ್ನು ಹೆರಿಗೆ ಮಾಡಿಸಲೆಂದಿ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಬೈಂದೂರು ಶಿರೂರಿನ ನಾಗರತ್ನ(32) ಎಂದು ಗುರುತಿಸ ಲಾಗಿದೆ. ಇವರು ಎರಡನೇ ಮಗುವಿಗೆ ಗರ್ಭಿಣಿ ಆಗಿದ್ದು ಚಿಕಿತ್ಸೆ ಬಗ್ಗೆ ಮಣಿಪಾಲ ಆಸ್ಪತ್ರೆಗೆ ಅ.14ರಂದು ಬಂದಿದ್ದರು. ಪರೀಕ್ಷಿಸಿದ ವೈದ್ಯರು ಮಗು ಹೊಟ್ಟೆ ಒಳಗಡೆ ಮೃತಪಟ್ಟಿದ್ದು ಮಗುವನ್ನು ಹೊರಗಡೆ ತೆಗೆಯಬೇಕಾದರೆ ಹೆರಿಗೆ ಮಾಡಿಸಿ ತೆಗೆಯಬೇಕು ಎಂದು ತಿಳಿಸಿದರು.

ಅದರಂತೆ ನಾಗರತ್ನ ಅವರನ್ನು ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಅ.16ರಂದು ಬೆಳಗಿನ ಜಾವ ಐಸಿಯುಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಬಾತ್‌ರೂಮ್‌ಗೆ ಹೋದ ನಾಗರತ್ನ, ಬಿದ್ದು ರಕ್ತ ಸ್ರಾವವಾಗಿ ಹೆರಿಗೆ ಆಗದೇ ಮೃತಪಟ್ಟಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News