×
Ad

ಬ್ಯಾಂಕಿಂಗ್ - ಹಣಕಾಸು ಸೇವೆಗಳ ವಿಶೇಷ ಉಪನ್ಯಾಸ

Update: 2025-10-18 18:51 IST

ಹಿರಿಯಡ್ಕ: ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗ ಮತ್ತು ಉದ್ಯೋಗ ಮಾಹಿತಿ ಕೋಶದ ಸಹಯೋಗದಲ್ಲಿ ’ಬ್ಯಾಂಕಿಂಗ್ ಮತ್ತು ಪೈನಾನ್ಸಿಯಲ್ ಸರ್ವಿಸಸ್‌ನಲ್ಲಿ ಉದ್ಯೋಗಾವಕಾಶ ಗಳು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಶನಿವಾರ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಎ.ಪಿ.ಲೀಡ್ ಬಿಸಿನೆಸ್ ಡೆವೆಲೆಪ್ಮೆಂಟ್ ಮತ್ತು ರಿಲೇಶಿಪ್ ಆಫೀಸರ್ ಶ್ಯಾಮ್ ಕಿಶೋರ್, ಸರಕಾರಿ ಮತ್ತು ಖಾಸಗಿ ವಲಯದಲ್ಲಿ ಲಭ್ಯವಿರುವ ಬ್ಯಾಂಕಿಂಗ್ ಹಾಗೂ ಹಣಕಾಸು ಸೇವೆಗಳ (ಪೈನಾನ್ಸಿಯಲ್ ಸರ್ವಿಸಸ್) ಉದ್ಯೋಗಾವಕಾಶಗಳ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು.

ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಜಯಪ್ರಕಾಶ್ ಶೆಟ್ಟಿ ಎಚ್. ವಹಿಸಿದ್ದರು. ಐಕ್ಯುಎಸಿ ಸಂಚಾಲಕ ಡಾ.ಲಿತಿನ್ ಬಿ.ಎಂ., ಉದ್ಯೋಗ ಮಾಹಿತಿ ಕೋಶದ ಸಂಚಾಲಕಿ ಅಪರ್ಣ ಕೆ.ಯು. ಮತ್ತು ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ನಂದೀಶ್ ಕುಮಾರ್ ಕೆ.ಸಿ. ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ತೃತೀಯ ಬಿ.ಕಾಂ. ವಿದ್ಯಾರ್ಥಿ ಯಮನಪ್ಪ ಸ್ವಾಗತಿಸಿದರು. ಸಿಂಧು ನಾಯಕ್ ಅತಿಥಿ ಪರಿಚಯ ಮಾಡಿದರು. ದಿವ್ಯಾಶ್ರೀ ಕಾರ್ಯಕ್ರಮ ನಿರೂಪಿಸಿದರು. ಸಿತೀಕ್ಷಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News