×
Ad

ಗುರುದತ್ ತನ್ನ ಭಾವನೆಗಳನ್ನು ಸಿನೆಮಾ ಮೂಲಕ ವ್ಯಕ್ತಪಡಿಸುತ್ತಿದ್ದರು: ಸಂವರ್ಥ ಸಾಹಿಲ್

Update: 2025-10-18 20:13 IST

ಉಡುಪಿ, ಅ.18: ಹಿಂದುಸ್ತಾನಿ ಚಿತ್ರರಂಗದಲ್ಲಿ ವಿಭಿನ್ನವಾದ ಪ್ರಯೋಗ ನಡೆಸಿ ಜನಪ್ರಿಯ ಸಿನೆಮಾ ನಿರ್ಮಿಸಿದ ಗುರುದತ್, ಮಿತ ಭಾಷಿಯಾಗಿ, ಅಂತರ್ಮುಖಿಯಾಗಿದ್ದರು. ಅವರ ಮನಸ್ಸಿನ ಮಾತು, ಭಾವನೆಗಳನ್ನು ತನ್ನ ಸಿನೆಮಾ ಮೂಲಕ ವ್ಯಕ್ತಪಡಿಸುತ್ತಿದ್ದರು ಎಂದು ಸಿನೆಮಾ ಬೋಧಕ, ವಿಶ್ಲೇಷಕ ಸಂವರ್ಥ ಸಾಹಿಲ್ ಹೇಳಿದ್ದಾರೆ.

ಉಡುಪಿ ರಥಬೀದಿ ಗೆಳೆಯರು ಸಾಂಸ್ಕೃತಿಕ ಸಂಘಟನೆ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ಆಡಿಯೋ ವಿಶುವಲ್ ಹಾಲ್‌ನಲ್ಲಿ ಆಯೋಜಿಸಲಾದ ‘ಗುರುದತ್ತ್- 100’ ಕಾರ್ಯಕ್ರಮದಲ್ಲಿ ಅವರು ಗುರು ದತ್ತರ ಕಲಾ ವಿಶೇಷತೆ ಕುರಿತು ಮಾತನಾಡುತಿದ್ದರು.

ಬದುಕು, ಭಾವ, ಬಿಂಬದ ಪ್ರಭಾವಕ್ಕೆ ಒಳಗಾಗಿದ್ದರು. ನೃತ್ಯ ನಿರ್ದೇಶಕರಾಗಿ ಸಿನೆಮಾ ರಂಗ ಪ್ರವೇಶಿಸಿದ ಅವರು, ಮೊದಲು ಭಾಝಿ ಸಿನೆಮಾವನ್ನು ನಿರ್ದೇಶಿಸಿದರು. ಅವರಲ್ಲಿ ಪ್ರತಿಭೆಯನ್ನು ಗುರುತಿಸುವ ಮತ್ತು ಪೋಷಿಸುವ ಗುಣ ಇತ್ತು. ಹಾಗಾಗಿ ಹಲವು ಮಂದಿಯನ್ನು ಚಿತ್ರರಂಗಕ್ಕೆ ಕರೆತಂದು ಬೆಳೆಸಿದರು.

ರಥಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಶಿ ವಂದಿಸಿದರು. ನಾಟಕ ವಿಭಾಗದ ಸಂಚಾಲಕ ಸಂತೋಷ್ ನಾಯಕ್ ಪಟ್ಲ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಇನ್ ಸರ್ಚ್ ಆಫ್ ಗುರುದತ್ತ್ ಚಿತ್ರ ಪ್ರದರ್ಶನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News