×
Ad

ವಿಶ್ವದಾಖಲೆಗಾಗಿ ಯೋಗಪಟು ತನುಶ್ರೀಗೆ ಅಭಿನಂದನೆ

Update: 2025-10-18 20:14 IST

ಉಡುಪಿ, ಅ.18: ಹತ್ತನೇ ವಿಶ್ವದಾಖಲೆ ಮಾಡಲಿರುವ ತನುಶ್ರೀ ಪಿತ್ರೋಡಿಗೆ ಶುಭ ಕೋರುವ ಕಾರ್ಯಕ್ರಮವನ್ನು ಉಡುಪಿಯ ಬಡಗಬೆಟ್ಟು ಕೋಪರೇಟಿವ್ ಸೊಸೈಟಿಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಈಗಾಗಲೇ ಯೋಗದಲ್ಲಿ ಎಂಟು ಮತ್ತು ಭರತನಾಟ್ಯದಲ್ಲಿ ಒಂದು ಒಟ್ಟು ಒಂಭತ್ತು ವಿಶ್ವದಾಖಲೆಗಳನ್ನು ಮಾಡಿರುವ ತನುಶ್ರೀ, ಕನ್ನಡ ಸಂಘ ಬೆಹೆರಿನ್ ಮತ್ತು ಬೆಹೆರಿನ್ ಯೋಗ ಕಮ್ಯೂನಿಟಿ ಸಹಯೋಗದಲ್ಲಿ ಅ.24ರಂದು ಬೆಹೆರಿನ್‌ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹತ್ತನೇ ವಿಶ್ವದಾಖಲೆ ಪ್ರಯತ್ನ ಮಾಡಲಿದ್ದಾರೆ.

ಶಾಸಕ ಯಶ್‌ಪಾಲ್ ಸುವರ್ಣ, ಬಡಗುಬೆಟ್ಟು ಕೋಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ, ಸಂಗೀತ ಗುರು ಮಧೂರು ಬಾಲಸುಬ್ರಹ್ಮಣ್ಯ, ನೃತ್ಯ ಗುರು ರಾಮಕೃಷ್ಣ ಕೊಡಂಚ, ಕಾಪು ಬಿಜೆಪಿ ಅಧ್ಯಕ್ಷ ಜಿತೇಶ್ ಶೆಟ್ಟಿ, ಉದ್ಯಾವರ ನಾಗೇಶ್ ಕುಮಾರ್, ನಗರಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ ನಿಟ್ಟೂರು, ಕಲಾವಿದ ಪ್ರಸನ್ನ ಶೆಟ್ಟಿ ಬೈಲೂರು, ಗಿರಿಜಾ ಸರ್ಜಿಕಲ್ಸ್‌ನ ಹರೀಶ್ ಕುಮಾರ್ ಶುಭ ಹಾರೈಸಿದರು.

ಈ ಹಿಂದೆ ಅದಮಾರು ಮಠದ ಪರ್ಯಾಯ ಸಂದರ್ಭ 45 ನಿಮಿಷದಲ್ಲಿ 245 ಆಸನಗಳನ್ನು ಮಾಡುವ ಮೂಲಕ ದಾಖಲೆ ಮಾಡಿದ್ದಳು. ಈಗ ಬೆಹೆರಿನ್‌ನಲ್ಲಿ ಒಂದು ಗಂಟೆಯಲ್ಲಿ 300 ಆಸನಗಳನ್ನು ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಯತ್ನ ಮಾಡಲಿದ್ದಾರೆ. ಸಂಧ್ಯಾ ಉದಯ್ ಪಿತ್ರೋಡಿ ರೀತುಶ್ರೀ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News