ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಕಿಟ್ ವಿತರಣೆ
ಉಡುಪಿ, ಅ.19: ಪಣಿಯಾಡಿ ಏಕದಂತ ಸೇವಾ ಸಮಿತಿಯ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ತಲಾ 2000ರೂ. ನಂತೆ ಒಟ್ಟು 27 ಕುಟುಂಬಗಳಿಗೆ 54000ರೂ. ಮೊತ್ತದ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಪುತ್ತಿಗೆ ಮಠದ ದಿವಾನ ನಾಗರಾಜ್ ಆಚಾರ್ಯ ಪಣಿಯಾಡಿ ಶ್ರೀಅನಂತಾಸನ ಶ್ರೀಲಕ್ಷ್ಮೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಪ್ರಾರ್ಥನೆ ಮೂಲಕ ಚಾಲನೆ ನೀಡಿದರು. ಸಮಿತಿಯ ಅಧ್ಯಕ್ಷ ನಾಗರಾಜ್ ಪಣಿಯಾಡಿ, ಗೌರವಾಧ್ಯಕ್ಷ ತಲ್ಲೂರು ಚಂದ್ರಶೇಖರ್ ಶೆಟ್ಟಿ, ಸಂಚಾಲಕ ಪಳ್ಳಿ ಲಕ್ಷ್ಮೀನಾರಾಯಣ ಹೆಗ್ಡೆ, ವಿಠ್ಠಲ ಮೂರ್ತಿ ಆಚಾರ್ಯ, ಸುಧಾಕರ್ ಪೂಜಾರಿ, ಪ್ರವೀಣ್ ಕುಂಜಿಬೆಟ್ಟು, ದಿವಾಕರ್ ಸಾಲಿಯಾನ್, ಕೆ. ನಾರಾಯಣ ಶೆಟ್ಟಿ, ರತ್ನಾಕರ್ ನಾಯ್ಕ್, ಪ್ರದೀಪ್ ಶ್ರೀಯಾನ್, ಸಚಿಂದ್ರ ನಾಯ್ಕ್, ಶಂಕರ್ ನಾಯ್ಕ್, ವಿಠ್ಠಲ್ ನಾಯ್ಕ್, ಮುದ್ದು ನಾಯ್ಕ್, ಹರೀಶ್ ನಾಯ್ಕ್, ಪ್ರೀತಮ್, ಆಯುಷ್, ಮಿತೇಶ್ ಸೇರಿಗಾರ್, ರಮೇಶ್ ನಾಯ್ಕ್, ಸುಜನ್ ಶೆಟ್ಟಿ, ಸುಧಾಕರ್ ನಾಯ್ಕ್, ವಿನಯ್, ಅನುರಾಗ್, ಜ್ಯೋತಿ ಶ್ರೀಯಾನ್, ಗೀತಾ ಸೇರಿಗಾರ್, ಶೋಭಾ ಕಾಮತ್, ಉಷಾ, ಜೆ. ಶೆಟ್ಟಿ, ಮುಕ್ತ, ಶಕುಂತಳ, ಅಚಿಂತ್ಯ, ಹರ್ಷಿಲ್ ಡಿ ತಿಂಗಳಾಯ, ಸಾನ್ವಿತ ಶೆಟ್ಟಿರ್ಗಾ, ಹರೀಶ್ ಶೆಟ್ಟಿಗಾರ್, ಕಾರ್ತಿಕ್ ಉಪಸ್ಥಿತರಿದ್ದರು.