ಕಾರು - ರಿಕ್ಷಾ ಢಿಕ್ಕಿ: ಮಕ್ಕಳು ಸಹಿತ ಏಳು ಮಂದಿಗೆ ಗಾಯ
Update: 2025-10-21 19:23 IST
ಬೈಂದೂರು, ಅ.21: ಕಾರೊಂದು ಅಟೋ ರಿಕ್ಷಾಗೆ ಢಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಗಾಯಗೊಂಡ ಘಟನೆ ನಾಯಕಬಕಟ್ಟೆ ಪ್ಲೈ ಓವರ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅ.20ರಂದು ನಡೆದಿದೆ.
ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಹೋಗುತ್ತಿದ್ದ ಕಾರು ಓವರ್ ಟೇಕ್ ಮಾಡುವ ಭರದಲ್ಲಿ ಮುಂದಿನಿಂದ ಹೋಗುತ್ತಿದ್ದ ರಿಕ್ಷಾಕ್ಕೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಕಾರು ಮತ್ತು ರಿಕ್ಷಾ ಪಲ್ಟಿಯಾಗಿದ್ದು, ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮರ್ಲಿ, ಸವಿತಾ ಖಾರ್ವಿ, ಯಶೋಧಾ, ಶ್ರದ್ದಾ, ಮತ್ತು ಮಕ್ಕಳಾದ ಹರ್ಷಿತ, ಮತ್ತು ರೀಷನ್, ರಿಕ್ಷಾ ಚಾಲಕ ಜಲಂದರ ಎಂಬವರು ಗಾಯಗೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.