ಕಚೇರಿಗೆ ನುಗ್ಗಿ ಲಕ್ಷಾಂತರ ರೂ. ನಗದು ಕಳವು: ಪ್ರಕರಣ ದಾಖಲು
Update: 2025-10-21 19:32 IST
ಬೈಂದೂರು, ಅ.21: ನಾವುಂದ ಎಂಬಲ್ಲಿ ಮೀನು ವ್ಯವಹಾರಕ್ಕೆ ಸಂಬಂಧಿಸಿದ ಕಚೇರಿಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ನಾವುಂದ ನಿವಾಸಿ ನೌಶಾದ್(39) ಎಂಬವರು ಮೀನು ಖರೀದಿ ಸಾಗಾಟ ವ್ಯವಹಾರ ಮಾಡಿಕೊಂಡಿದ್ದು ಅವರ ವ್ಯವಹಾರಕ್ಕೆ ಅವರ ಮನೆಗೆ ಹೊಂದಿಕೊಂಡು ಕಛೇರಿಯನ್ನು ತೆರೆದಿದ್ದರು. ಅ.17ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಮೀನು ವ್ಯವಹಾರದಿಂದ ಬಂದಿರುವ ಹಣ 1,88,000ರೂ. ವನ್ನು ಕಚೇರಿಯ ಡ್ರಾವರ್‌ನಲ್ಲಿ ಇಟ್ಟಿದ್ದರು.
ಅ.18ರಂದು ಬೆಳಗ್ಗೆ ಕಛೇರಿಗೆ ಬಂದು ನೋಡುವಾಗ ಡ್ರಾವರ್‌ನಲ್ಲಿ ಇಟ್ಟಿದ್ದ ಹಣ ಕಳವು ಆಗಿರುವುದು ಕಂಡು ಬಂದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.