×
Ad

ಪೂರ್ಣಪ್ರಜ್ಞ ಕಾಲೇಜು ಹಳೆವಿದ್ಯಾರ್ಥಿಗಳ ಸಂಘದ ಕಾರ್ಯಾಧ್ಯಕ್ಷರಾಗಿ ಎಂ.ಆರ್.ಹೆಗಡೆ ಆಯ್ಕೆ

Update: 2025-10-21 20:33 IST

ಉಡುಪಿ.ಅ.21: ನಗರದ ಪೂರ್ಣಪ್ರಜ್ಞ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ ಅದಮಾರು ಮಠಾಧೀಶರಾದ ಶ್ರೀಈಶಪ್ರಿಯ ತೀರ್ಥ ಶ್ರೀಪಾದರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಡಾ.ಪಿ.ಎಸ್.ಐತಾಳ್ ಹಾಗೂ ಡಾ.ಜಿ.ಎಸ್. ಚಂದ್ರಶೇಖರ್ ಉಪಸ್ಥಿತರಿದ್ದು ತಂಡಕ್ಕೆ ಶುಭ ಹಾರೈಸಿದರು. ಅನುಗ್ರಹ ಸಂದೇಶ ನೀಡಿದ ಅದಮಾರು ಶ್ರೀಗಳು ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು.

ಸುಪರ್ಣ ಅವರು ಅತಿಥಿಗಳನ್ನು ಸ್ವಾಗತಿಸಿದರು. ಹಿಂದಿನ ವರ್ಷದ ವರದಿ, ವಾರ್ಷಿಕ ವರದಿ, ಪರಿಶೋಧಿತ ಲೆಕ್ಕ ಪತ್ರಗಳನ್ನು ಸಭೆಯಲ್ಲಿ ಮಂಡಿಸಲಾಯಿತು. ಬಳಿಕ ನೂತನ ಪದಾಧಿಕಾರಿಗಳ ಆಯ್ಕೆಯೂ ನಡೆಯಿತು. ಡಾ.ಎಂ.ಆರ್.ಹೆಗಡೆ ಅವರು ಸಂಘದ ಕಾರ್ಯಾಧ್ಯಕ್ಷರಾಗಿ ಮರು ಆಯ್ಕೆಯಾದರು.

ನೂತನ ಪದಾಧಿಕಾರಿಗಳ ವಿವರ: ಚಯರ್‌ಮೆನ್: ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಗೌರವಾಧ್ಯಕ್ಷರು-ಡಾ.ಜಿ.ಎಸ್.ಚಂದ್ರಶೇಖರ್ ಹಾಗೂ ಡಾ.ಎ.ಪಿ.ಭಟ್, ಅಧ್ಯಕ್ಷರು-ಡಾ.ರಾಮು ಎಲ್., ಕಾರ್ಯಾಧ್ಯಕ್ಷರು- ಡಾ.ಎಂ.ಆರ್.ಹೆಗಡೆ.

ಉಪಾಧ್ಯಕ್ಷರು-ವಿದ್ಯಾವಂತ ಆಚಾರ್ಯ ಹಾಗೂ ಪದ್ಮಾ ಕಿಣಿ, ಕಾರ್ಯದರ್ಶಿ- ತೇಜಸ್ವಿ ಶಂಕರ್, ಜತೆ ಕಾರ್ಯ ದರ್ಶಿಗಳು- ಸುಭಾಶಿತ್ ಕುಮಾರ್ ಹಾಗೂ ಸುಪರ್ಣಾ, ಕೋಶಾದಿಕಾರಿ-ಅನುಷಾ, ಶಿಕ್ಷಕ ಪ್ರತಿನಿಧಿ- ಡಾ. ಮಹೇಶ್ ಭಟ್.

ಸದಸ್ಯರು: ಡಾ.ಬಿ.ಎಂ.ಸೋಮಯಾಜಿ, ಮುರಲಿ ಕಡೆಕಾರ್, ಡಾ.ಪಿ. ಎಸ್.ಐತಾಳ್, ವಿಮಲಾ ಚಂದ್ರಶೇಖರ್, ಎಂ.ನಾಗರಾಜ್ ಹೆಬ್ಬಾರ್, ತಾರಾದೇವಿ, ಈಶ್ವರ ಚಿಟ್ಪಾಡಿ, ಸುರೇಶ್ ರಮಣ ಮಯ್ಯ, ಪ್ರತಾಪ್‌ಕುಮಾರ್ ಉದ್ಯಾವರ, ಶ್ರೀರಕ್ಷಾ, ಶಾಲಿನಿ, ಬಿ.ಎಂ.ಭಟ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News